39.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಚಾರ: ಸುಳ್ಯದಲ್ಲಿ ಇಬ್ಬರನ್ನು ಬಂಧಿಸಿದ ಪೊಲೀಸರು

Must read

 ಸುಳ್ಯ:
ಬಸ್ಸಿನಲ್ಲಿ
 ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಡನೆ
 ಯುವಕನೊಬ್ಬ ಅನುಚಿತವಾಗಿ ವರ್ತಿಸಿರುವ ಆರೋಪ ಹಾಗೂ
ಆ ಯುವಕನಿಗೆ ತಂಡವೊಂದು ಹಿಗ್ಗಾಮುಗ್ಗಾ ಥಳಿಸಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಸೋಮವಾರ ಎರಡು ಪ್ರತ್ಯೇಕ
ಪ್ರಕರಣ ದಾಖಲಾಗಿದೆ.

kadabatimes.in


kadabatimes.in

ಹಲ್ಲೆ
ಮಾಡಿದ ಆರೋಪದಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದು  ಹಿಂದೂ
ಸಂಘಟನೆ
ಕಾರ್ಯಕರ್ತರು ಎಂದು ಹೇಳಲಾಗುತ್ತಿರುವ ವರ್ಷಿತ್ ಮತ್ತು ಮಿಥುನ್ ಬಂಧಿತರು. ಬಂಧನದ ಬಳಿಕ ಅವರನ್ನು ಸುಳ್ಯ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


kadabatimes.in

ಇನ್ನು,
ಕಿರುಕುಳಕ್ಕೆ ಒಳಗಾದ ಯುವತಿಯ ನೀಡಿದ ದೂರಿನ ಮೇರೆಗೆ ಹಲ್ಲೆಗೊಳಗಾದ ಯುವಕ ನಿಯಾಝ್ ಮೇಲೂ ಕೇಸು ದಾಖಲಾಗಿದೆ ಎಂದು ತಿಳಿದುಬಂದಿದೆ.


kadabatimes.in

ಪ್ರತಿಭಟನೆ:
ಯುವಕನ
ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಹಿಂದು ಸಂಘಟನೆಯ ಇಬ್ಬರನ್ನು ಬಂಧಿಸಿರುವ ಪೋಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಪರಿವಾರ ಸಂಘಟನೆಯು ಪೋಲೀಸರ  ಕ್ರಮದ
ವಿರುದ್ಧ ಇಂದು ಪೊಲೀಸ್ ಠಾಣಾ ಮುಂಭಾಗ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಪೊಲೀಸರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ

You cannot copy content of this page