ನೂಜಿಬಾಳ್ತಿಲ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರ ನಶಾಮುಕ್ತಿ ಅಭಿಯಾನ

kadaba times

ಕಡಬ ಟೈಮ್ಸ್, ಪ್ರಮುಖ ಸುದ್ದಿ:  ನಶಾಮುಕ್ತ ಭಾರತ ಅಭಿಯಾನ” ಎಂಬ ಶೀರ್ಷಿಕೆಯಲ್ಲಿ, ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಸ್ವಯಂಸೇವಕರು “ಮನೆಯೊಳಗೆ ಮನದ ಮಾತು” ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮನೆ ಮನೆಗೆ ಭೇಟಿ ನೀಡಿ ನಶಾಮುಕ್ತಿ ಕುರಿತು ಜಾಗೃತಿ ಮೂಡಿಸುವ ನೂತನ ಪ್ರಯತ್ನವನ್ನು ಕೈಗೊಂಡಿದ್ದಾರೆ.

kadaba times
uniq

ನೆಲ್ಯಾಡಿಯ ಸಂತ ಚಾರ್ಜ್ ವಿದ್ಯಾ ಸಂಸ್ಥೆಯ ಸ್ವಯಂಸೇವಕರು ಆರಂಭಿಸಿರುವ ವಿಭಿನ್ನ ಅಭಿಯಾನಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.  ಶಿಬಿರಾರ್ಥಿಗಳು ನೂಜಿಬಾಳ್ತಿಲ ಗ್ರಾಮದ ಸುತ್ತಮುತ್ತಲಿನ ಮನೆಗಳಿಗೆ ತೆರಳಿ, ಮನೆಯವರೊಂದಿಗೆ ಕುಳಿತು ಮುಕ್ತ ಸಂವಾದ ನಡೆಸಿದರು.

 ಗ್ರಾಮದ ಕೆಲ  ಕುಟುಂಬಸ್ಥರೊಂದಿಗೆ ಮಕ್ಕಳು ಪುಸ್ತಕ ಹಿಡಿದು ಓದಿದಂತೆ,  ಪ್ರಶ್ನೋತ್ತರ ಪತ್ರಿಕೆ ಹಿಡಿದು ಕುಟುಂಬದೊಂದಿಗೆ ಮಾತನಾಡಿದರು.  “ಮದ್ಯ ಸೇವನೆ ಮಾಡುತ್ತೀರಾ?  ನಿಮ್ಮ ಮನೆಗೆ ವ್ಯಸನದ ಸಮಸ್ಯೆ ಇದೆಯಾ? ಮಕ್ಕಳಿಗೆ ಏನು ಬೋಧಿಸುತ್ತೀರಿ? ಅವರ ಜೀವನ ಶೈಲಿ, ಶಿಕ್ಷಣ, ಮಕ್ಕಳ ಭವಿಷ್ಯ ಹಾಗೂ ವ್ಯಸನದ ಹಾನಿಕಾರಕ ಪರಿಣಾಮಗಳ ಬಗ್ಗೆ ಚರ್ಚೆ, ನೇರ ಪ್ರಶ್ನೆಗಳು ಬಾಗಿಲಿನ ಅಂಗಳದಲ್ಲೇ ಕೇಳಿಬಂದವು.

ಸಮಾಜದಲ್ಲಿ ಮದ್ಯ, ಗಾಂಜಾ, ಜುಗಾರಿ ಮುಂತಾದ ವ್ಯಸನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗ, ಯುವ ಸ್ವಯಂಸೇವಕರು ಕೈಗೊಂಡ ಈ ಅಭಿಯಾನ ಹೊಸ ಹಾದಿಯ ಪ್ರಯೋಗವಾಗಿದೆ.

kadaba times
kadaba times

ನೆಲ್ಯಾಡಿಯ ಸಂತ ಚಾರ್ಜ್ ವಿದ್ಯಾ ಸಂಸ್ಥೆಯ ಸ್ವಯಂಸೇವಕರ ಈ ಪ್ರಯೋಗಾತ್ಮಕ ಅಭಿಯಾನವು ಕೇವಲ ಎನ್ನೆಸ್ಸೆಸ್ ಶಿಬಿರದ ಒಂದು ಅಂಗವಲ್ಲ, ಇದು ಸಮಾಜ ಬದಲಾವಣೆಗಾಗಿ ಯುವ ಶಕ್ತಿಯ ಹೋರಾಟ. ನೂಜಿಬಾಳ್ತಿಲದಲ್ಲಿ ಮೊಳಕೆಯೊಡೆಯುತ್ತಿರುವ ಈ ಬದಲಾವಣೆಯ ಬೀಜವು, ಇನ್ನಷ್ಟು ಗ್ರಾಮಗಳಲ್ಲಿ ಹರಡಿ, ವ್ಯಸನಮುಕ್ತ ಸಮಾಜ ಕಟ್ಟುವ ದಾರಿಯಲ್ಲಿನ ಮಹತ್ವದ ಹೆಜ್ಜೆಯಾಗಲಿದೆ.

ಬದಲಾವಣೆಗೆ ಯುವ ಶಕ್ತಿ: ಇಂತಹ ಕ್ಯಾಂಪ್‌ಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ, ಸಮಸ್ಯೆ ಅರಿವು, ನಾಯಕತ್ವ ಹಾಗೂ ಸೇವಾ ಮನೋಭಾವವನ್ನು ಬೆಳೆಸುತ್ತವೆ. ಮನೆ ಮನೆಗೆ ತೆರಳಿ ಜನರೊಂದಿಗೆ ನೇರವಾಗಿ ಮಾತನಾಡುವುದು ಅತಿ ಕಷ್ಟದ ಕೆಲಸ. ಆದರೆ, ಯುವಕರು ಅದನ್ನು ನಗುನಗುತ್ತಾ ನಿರ್ವಹಿಸುತ್ತಿರುವುದು ಸಮಾಜದಲ್ಲಿ ಹೊಸ ಆಶಾವಾದ ಮೂಡಿಸಿದೆ.

Related Articles

Latest Articles