
ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕುಮಾರಪರ್ವತ ತಪ್ಪಲಿನ ಪ್ರದೇಶದಲ್ಲಿ ಭಾನುವಾರ ನಿರಂತರ ಮಳೆ ಸುರಿದಿದ್ದು ಕಡಬ ಸುತ್ತ ಮುತ್ತ ಭಾರೀ ಗಾಳಿ ಮಳೆಯಾಗಿದೆ.


ನಿರಂತರ ಗಾಳಿ ಮಳೆಯಿಂದ ಕಡಬ – ಎಡಮಂಗಲ ಮುಖ್ಯ ರಸ್ತೆಯ ಪಾಲೋಲಿ ಬಳಿ ರಸ್ತೆಗೆ ಮರ ಬಿದ್ದು ರಸ್ತೆ ಸಂಪರ್ಕ ಕಡಿತ ಗೊಂಡಿತ್ತು.
ಕೆಲವು ಗಂಟೆ ವಾಹನ ಸಂಚಾರಕ್ಕೆ ಅಡಚನೆ ಉಂಟಾಗಿತ್ತು. ಹೀಗಾಗಿ ಬದಲಿ ಮಾರ್ಗದಲ್ಲಿ ವಾಹನ ಸವಾರರು ಬಳಸಿದ್ದರು.


ಮರಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡ ಮಾಹಿತಿ ತಿಳಿದ ತಕ್ಷಣ ಪಟ್ಟಣ ಪಂಚಾಯತ್ ನ ಪಿಜಕಳ ವಾರ್ಡ್ ಸದಸ್ಯ ದಯಾನಂದ ಗೌಡ ನೇತೃತ್ವದಲ್ಲಿ ಶೌರ್ಯ ಬಳಗದ ಸದಸ್ಯರು ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಿದರು.
