32.5 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಡಬದಲ್ಲಿ ನಡೆದ ಕೆಸರ್ದ ಕಂಡೊಡು ಬಿರುವೆರ್ನ ಗೊಬ್ಬುಲು:ಕ್ರೀಡಾ ಸಾಧಕರಿಗೆ ಸನ್ಮಾನ

Must read

 ಕಡಬ ಟೈಮ್, ಯುವವಾಹಿನಿ
(
ರಿ) ಕಡಬ ಘಟಕದ ಆಶ್ರಯದಲ್ಲಿ ಹಾಗೂ ಕಡಬ ತಾಲೂಕು  ಬಿಲ್ಲವ
ಸಂಚಾಲನ ಸಮಿತಿ, ಕಡಬ ತಾಲೂಕಿನ  ಎಲ್ಲಾ
ಬಿಲ್ಲವ ಗ್ರಾಮ ಸಮಿತಿಯ  ಸಹಕಾರದೊಂದಿಗೆ  ಕಡಬದ
ಜಯದುರ್ಗಾಪರಾಮೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಸೆ.22 ರಂದು  3 ನೇ
ವರ್ಷದ ಕೆಸರ್ದ ಕಂಡೊಡು ಬಿರುವೆರ್ನ ಗೊಬ್ಬುಲು ಕಾರ್ಯಕ್ರಮ ನಡೆಯಿತು.

kadabatimes.in


kadabatimes.in

ಹಿರಿಯರಾದ  ಲಿಂಗಪ್ಪ
ಪೂಜಾರಿ ಕೇಪುಳು ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ಅಕ್ಷಯ ಕಾಲೇಜಿನ ಮುಖ್ಯಸ್ಥ  ಜಯಂತ
ನಡುಬೈಲು  ಮಾತನಾಡಿ,
ಸಮುದಾಯದ  ಯುವಕರು
ಮತ್ತು ಮಕ್ಕಳು ಉನ್ನತ ಮಟ್ಟಕ್ಕೆ ಏಕಬೇಕು, ಅಂತವರನ್ನು ಗುರುತಿಸಿ  ಬೆನ್ನು
ತಟ್ಟಿ ಹುರಿದುಂಬಿಸಿದರೆ ಸಮಾಜಕ್ಕೆ ಏನಾದರೂ ಕೆಲಸ ಮಾಡಬೇಕೆಂಬ ಹುಮ್ಮಸು ಅವರಲ್ಲಿ ಬರುತ್ತದೆ ಎಂದರು.


kadabatimes.in

ಘಟಕದ
ಅಧ್ಯಕ್ಷ ಸುಂದರ ಪೂಜಾರಿ  ಸಭಾಧ್ಯಕ್ಷತೆ
ವಹಿಸಿದ್ದರು. ವೇದಿಕೆಯಲ್ಲಿ ಸಂತೋಷ್ ಕುಮಾರ್ ಪ್ರದೀಪ್ ನಡುವಲ್ , ಅರುಣ್ ಕುಮಾರ್  ಜೆಡೆಮನೆ,
, ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ  ಶಿವಪ್ರಸಾದ್
ನೂಚಿಲ,ತಾ.ಪಂ ಮಾಜಿ
ಸದಸ್ಯೆ   ಶ್ರೀಮತಿ
ಪಿ ವೈ ಕುಸುಮ , ನಿವೃತ್ತ
ಪಶುವೈದ್ಯಾಧಿಕಾರಿ ಅಶೋಕ್ ಕುಮಾರ್ಬಿಲ್ಲವ
ಸಂಚಲನ ಸಮಿತಿಯ ಸಂಚಾಲಕ ಜಿನ್ನಪ್ಪ ಸಾಲಿಯನ್ , ವಸಂತ ಬದಿಬಾಗಿಲು , ಸರಿತಾ ಉಂಡಿಲ, ಘಟಕದ ಕಾರ್ಯದರ್ಶಿ ಜಯಪ್ರಕಾಶ್  ಉಪಸ್ಥಿತರಿದ್ದರು.


kadabatimes.in


ಸಂದರ್ಭದಲ್ಲಿ ಕ್ರೀಡಾ ಸಾಧಕಿ  ಮ್ಯಾರಥಾನ್
ಕ್ರೀಡಾಪಟು ಶ್ರೀಮತಿ ನೇತ್ರಾವತಿ  ಹೊಪ್ಪಾಳೆ
ಬಲ್ಪ, ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಮ್ರತಾ ಲೋಕೇಶ್ ಪೂಜಾರಿ ಕೇರ್ಪುಡೆ ಇವರನ್ನು ಗೌರವಿಸಲಾಯಿತು.ಬಳಿಕ ಹಲವು ರೀತಿಯ ಸ್ಪರ್ಧೆಗಳು ನಡೆಯಿತು.ಸಾಯಂಕಾಲ  ಸಮಾರೋಪ
ಸಮಾರಂಭ ನಡೆಯಿತು .

You cannot copy content of this page