Bigg Boss entry: ತುಳು ಹಾಗೂ ಕನ್ನಡದಲ್ಲಿ ವ್ಲಾಗ್ಸ್ ಮಾಡುವ ಕರಾವಳಿಯ ಹುಡುಗಿ ಬಿಗ್ ಬಾಸ್ ನಲ್ಲಿ!

kadaba times

ಕಡಬ ಟೈಮ್ಸ್, ಮನೋರಂಜನೆ:   ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆ ಪ್ರಸಾರವಾಗುತ್ತಿದೆ.  ಈಗಾಗಲೇ ‘ಕ್ವಾಟ್ಲೆ ಕಿಚನ್’ ಗ್ರ್ಯಾಂಡ್ ಫಿನಾಲೆ ಸಂಚಿಕೆ ವೇಳೆ 3 ‘ಬಿಗ್ ಬಾಸ್ ಕನ್ನಡ 12’ ಸ್ಪರ್ಧಿಗಳನ್ನ ರಿವೀಲ್ ಮಾಡಲಾಯಿತು. ಕಾಕ್ರೋಚ್ ಸುಧಿ, ಮಂಜುಭಾಷಿಣಿ ಹಾಗೂ ಮಲ್ಲಮ್ಮ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವುದು ಖಚಿತವಾಗಿತ್ತು. ಇದೀಗ 4ನೇ ಸ್ಪರ್ಧಿಯನ್ನು ರಿವೀಲ್ ಮಾಡಲಾಗಿದೆ.

kadaba times
uniq

ಆ ನಾಲ್ಕನೇ ಸ್ಪರ್ಧಿ ಯಾರು ಗೊತ್ತಾ?  :ಯೂಟ್ಯೂಬರ್, ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ, ಆಗಾಗ ಟ್ರೋಲ್ ಆಗುವ ಕಂಟೆಂಟ್ ಕ್ರಿಯೇಟರ್ ಮಂಗಳೂರು ಮೂಲದ ರಕ್ಷಿತಾ ಶೆಟ್ಟಿ.  ‘ಬಲೆ.. ಬಲೆ..’ ಎನ್ನುತ್ತಾ ತುಳು ಹಾಗೂ ಕನ್ನಡದಲ್ಲಿ ವ್ಲಾಗ್ಸ್ ಮಾಡುವ ಕರಾವಳಿಯ ಹುಡುಗಿ ರಕ್ಷಿತಾ ಶೆಟ್ಟಿ ‘ಬಿಗ್ ಬಾಸ್’ ಮನೆಗೆ ಬಂದಿದ್ದಾರೆ.  ಸರಿಯಾಗಿ ಕನ್ನಡ ಮಾತಾಡದ, ತಪ್ಪು ತಪ್ಪಾಗಿ ಕನ್ನಡ ಮಾತಾಡಿ ಟ್ರೋಲ್ ಆಗಿರುವ ರಕ್ಷಿತಾ ಶೆಟ್ಟಿ ಇದೀಗ ‘ಬಿಗ್ ಬಾಸ್ ಕನ್ನಡ 12’ ಸ್ಪರ್ಧಿ!

ರಕ್ಷಿತಾ ಶೆಟ್ಟಿ ತಾಯಿ ಮೂಲತಃ ಮಂಗಳೂರಿನವರು. ರಕ್ಷಿತಾ ಶೆಟ್ಟಿ ಹುಟ್ಟಿದ್ದು ಮಂಗಳೂರಿನ ಪಡುಬಿದ್ರೆಯಲ್ಲಿ. ಆದರೆ, ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಮನೆಯಲ್ಲಿ ರಕ್ಷಿತಾ ಶೆಟ್ಟಿ ಮಾತನಾಡುವುದು ತುಳು. ಹೀಗಾಗಿ, ರಕ್ಷಿತಾ ಶೆಟ್ಟಿಗೆ ಕನ್ನಡ ಸರಿಯಾಗಿ ಬರಲ್ಲ. ಕನ್ನಡ ಸರಿಯಾಗಿ ಬರದಿದ್ದರೂ, ಕನ್ನಡದಲ್ಲೂ ರಕ್ಷಿತಾ ಶೆಟ್ಟಿ ವ್ಲಾಗ್ಸ್ ಮಾಡುತ್ತಾರೆ. ಬರೀ ಕನ್ನಡ ಅಲ್ಲ.. ತುಳು, ಹಿಂದಿ, ಇಂಗ್ಲೀಷ್‌ನಲ್ಲಿ ವ್ಲಾಗ್ಸ್, ರೀಲ್ಸ್ ಮಾಡುತ್ತಿರುತ್ತಾರೆ.

ರಕ್ಷಿತಾ ಶೆಟ್ಟಿ ವಿವಾ ಕಾಲೇಜಿನಲ್ಲಿ ಬಿಎಎಂಎಂಸಿ – ಬ್ಯಾಚುಲರ್ ಆಫ್ ಆರ್ಟ್ಸ್ ಮಾಸ್ ಮೀಡಿಯಾ ಕಮ್ಯೂನಿಕೇಷನ್ ಓದಿದ್ದಾರೆ. ಡಿಗ್ರಿ ಮುಗಿಸಿರುವ ರಕ್ಷಿತಾ ಶೆಟ್ಟಿಗೆ ಸ್ನಾತಕೋತ್ತರ ಪದವಿ ಪಡೆಯಲು ಇಂಟ್ರೆಸ್ಟ್ ಇಲ್ಲವಂತೆ. ಹಿಂದಿ ಮಿಶ್ರಿತ ತುಳು ವ್ಲಾಗ್‌ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡಿರುವವರು ರಕ್ಷಿತಾ ಶೆಟ್ಟಿ.

kadaba times
kadaba times

ನಿತ್ಯದ ಜೀವನದಲ್ಲಾಗುವ ಘಟನೆಗಳನ್ನೇ ವ್ಲಾಗ್ಸ್ ಮಾಡುವುದು ರಕ್ಷಿತಾ ಶೆಟ್ಟಿ ಸ್ಪೆಷಾಲಿಟಿ. ರಕ್ಷಿತಾ ಶೆಟ್ಟಿ ಅವರ ಹಲವು ವಿಡಿಯೋಗಳು ಯದ್ವಾತದ್ವಾ ಟ್ರೋಲ್ ಆಗಿವೆ. ಆದರೆ, ರಕ್ಷಿತಾ ಶೆಟ್ಟಿ ಯಾವುದಕ್ಕೂ ತಲೆ ಕೆಡಿಸಿಕೊಂಡವರಲ್ಲ. ‘’ನನಗೆ ಟ್ರೋಲ್ ಇಷ್ಟ, ನಾನು ಅದನ್ನ ಎಂಜಾಯ್ ಮಾಡ್ತೀನಿ’’ ಅಂತಾರೆ ರಕ್ಷಿತಾ ಶೆಟ್ಟಿ.

 

Related Articles

Latest Articles