32.5 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಡಬ ಸರ್ಕಾರಿ ಕಾಲೇಜು ವತಿಯಿಂದ ವಾಳ್ಯದಲ್ಲಿ ನಡೆಯುತ್ತಿರುವ NSS ಶಿಬಿರ

Must read

ಕಡಬ ಟೈಮ್ಸ್: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2024 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು  ಸಮಾಜ ಸೇವಕ  ಕರುಣಾಕರ  ಗೋಗಟೆ ನಾಡೋಳಿ ನೆರವೇರಿಸಿ ಮಾತನಾಡಿದರು.
ಶ್ರೀ ವಿಶ್ವನಾಥ ಶೆಟ್ಟಿ ಉಪನ್ಯಾಸಕರು  ಮತ್ತು ಕಾರ್ಯಕ್ರಮಾಧಿಕಾರಿ ಸಂತ ಜೋರ್ಜ್ ಪದವಿಪೂರ್ವ ಕಾಲೇಜು  ನೆಲ್ಯಾಡಿ ಅತಿಥಿಗಳಾಗಿ ಶಿಬಿರಾರ್ಥಿ ಗಳಿಗೆ ತಮ್ಮ ಅನುಭವದ  ಹಿತವಚನಗಳನ್ನು ನುಡಿದರು. 

ಕಡಬ ನೂಜಿಬಾಳ್ತಿಲ ಕ್ಲಿಷ್ಟ ರ್  ಸಿ.ಆರ್.ಪಿ ಶ್ರೀ ಗಣೇಶ್ ನಡುವಾಲ್,ಶ್ರೀ ರಾಮಕೃಷ್ಣ ಮಲ್ಲಾರ, ಅಧ್ಯಕ್ಷರು ಪ್ರಾಥಮಿಕ ಶಾಲಾಶಿಕ್ಷಕರಸಂಘ ಕಡಬ,ಶ್ರೀ ಇ.ಸಿ.ಚೆರಿಯಾನ್ ನಿವೃತ್ತ  ಪ್ರಾಂಶುಪಾಲರು,ಶ್ರೀ ಶಿವಪ್ರಸಾದ  ಮೈಲೇರಿ, ಅಧ್ಯಕ್ಷರು ಯುವಜನ ಒಕ್ಕೂಟ ರಿ ಕಡಬ ತಾಲೂಕು,ಶ್ರೀ ದಯಾನಂದ ಉಂಡಿಲ ಅಧ್ಯಕ್ಷರು ಪೂರ್ವ  ವಿನದ್ಯಾರ್ಥಿ ಸಂಘ, ಅತಿಥಿಗಳಾಗಿ ಮಾತನಾಡಿದರು.ಶಿಬಿರದ  ಸಂಚಾಲಕರಾದ ಶ್ರೀ ಕಾಶಿನಾಥ ಗೋಗಟೆ ಶಿಬಿರದ ಆಯೋಜನೆಯ ಉದ್ದೇಶ ಮತ್ತು ಅಗತ್ಯಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಪ್ರಾಂಶುಪಾಲರಾದ ಶ್ರೀಯುತ ವಾಸುದೇವ ಗೌಡ ಕೆ.ಇವರು ಕಾಲೇಜಿನ ರಾಷ್ಟ್ರೀಯ  ಸೇವಾ ಯೋಜನೆಯ ಇತಿಹಾಸದ ಮೆಲುಕು  ಹಾಕಿದರು ಮತ್ತು ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಉಪನ್ಯಾಸಕರನ್ನು ಅಭಿನಂದಿಸಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ವಸಂತ ಉಳಿಪು ಧ್ವಜಾರೋಹಣ ನೆರವೇರಿಸಿದರು,ಶಿಬಿರದ ಸಂಚಾಲಕರಾದ ಕಾಶಿನಾಥ ಗೋಗಟೆ ಶ್ರಮದಾನ ಉದ್ಘಾಟಿಸಿದ ರು.

kadabatimes.in
kadabatimes.in
kadabatimes.in

ಮುಖ್ಯ ಶಿಕ್ಷಕಿ  ಶೋಭಾವತಿ ಸ್ವಾಗತಿಸಿದರು.ಕಾರ್ಯಕ್ರಮಾಧಿಕಾರಿ ಸಲೀನ್ ಕೆ.ಪಿ. ಪ್ರಾಸ್ತಾವಿಕ ಮಾತನಾಡಿದರು ಮತ್ತು ದನ್ಯವಾದ ಸಲ್ಲಿಸಿದರು.ಉಪನ್ಯಾಸಕಿ ಲಾವಣ್ಯ ಹೇಮಂತ ಮಂಡೆಕರ ಕಾರ್ಯಕ್ರಮ  ನಿರೂಪಿಸಿದರು. ಉಪನ್ಯಾಸಕರಾದ ಶ್ರೀ ಕಬೀರ್ ಟಿ,ಕುಮಾರಿ ಮಲ್ಲಿಕಾ, ಶ್ರೀಮತಿ ಪವಿತ್ರ, ಕುಮಾರಿ ಸುಮನ ಸಹಕರಿಸಿದರು.ಕಾಲೇಜಿನ ರಾಷ್ಟ್ರೀಯ  ಸೇವಾ ಯೋಜನೆ ಘಟಕದ ನಾಯಕ ಮೇಘನಾಥ ಮತ್ತು ಯಶ್ವಿನಿ ಉಪಸ್ಥಿತರಿದ್ದರು

You cannot copy content of this page