ಕಡಬ: ಪಟ್ಟಣ ಪಂಚಾಯತ್ ಅಧೀನದಲ್ಲಿರುವ ಹಸಿಮೀನು
ಮಾರುಕಟ್ಟೆ ಇತ್ತೀಚೆಗೆ ಮೂರು ಸ್ಟಾಲ್
ಗಳು ಬರೋಬ್ಬರಿ 24 ಲಕ್ಷಕ್ಕೆ ಏಲಂ ಆಗುವ ಮೂಲಕ ಭಾರೀ ಸುದ್ದಿಯಾಗಿತ್ತು.




ಇದೀಗ ಮೀನು ಮಾರುಕಟ್ಟೆ ಪ್ರಾಂಗಣದ ಬಳಿ ಕೊಳಚೆ
ನೀರು ಸಂಗ್ರಹವಾಗಿದ್ದು ಗಬ್ಬು ವಾಸನೆಯಿಂದ ಜನ ಮೂಗುಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಡೆಂಗ್ಯೂ ಮಲೇರಿಯಾದಂತಹ ರೋಗಗಳು
ಜನರನ್ನು ಕಾಡಿತ್ತು.ಇದೀಗ ಬಿಟ್ಟು ಬಿಟ್ಟು ಮಳೆ ಬರುವ ಹಿನ್ನೆಲೆ ಕೊಳಕು ನೀರಿನಲ್ಲಿ ಸೊಳ್ಳೆಗಳು
ಹುಟ್ಟಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ.


ವಾರ್ಷಿಕ ಹರಾಜಿನಲ್ಲಿ ಲಕ್ಷಗಟ್ಟಲೆ ಆದಾಯ ಸಂಗ್ರಹಿಸುವ ಕಡಬ
ಪಟ್ಟಣ ಪಂಚಾಯತ್ ಮಾತ್ರ ಶುಚಿತ್ವದ ನಿಟ್ಟಿನಲ್ಲಿ
ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.

