ಕಡಬ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಈ
ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವು ಸೆ.28ರಿಂದ ಅ.4 ರ ವರೆಗೆ ದ.ಕ ಜಿ.ಪಂ ಕಿರಿಯ ಪ್ರಾಥಮಿಕ
ಶಾಲೆ ವಾಳ್ಯದಲ್ಲಿ ನಡೆಯಿತು.




ಸೆ.28
ರಂದು ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ ಗೌಡ ಕೆ ರವರ ಅಧ್ಯಕ್ಷತೆಯಲ್ಲಿ
ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು ಹಿರಿಯ ಸಾಮಾಜಿಕ ಮುಂದಾಳು ಕರುಣಾಕರ ಗೋಗಟೆ ನಾಡೋಳಿ ಉದ್ಘಾಟಿಸಿ ಈ ಶಿಬಿರವು ಮಕ್ಕಳಲ್ಲಿ
ಸೇವಾಮನೋಬಾವ, ಸಹಜೀವನ,ಭಾವೈಕ್ಯತೆ, ನಾಯಕತ್ವ ಗುಣಗಳನ್ನು ಬೆಳೆಸಲು ಸಹಾಯಕಾರಿ ಎಂದರು.
ನೆಲ್ಯಾಡಿ ಸೈಂಟ್ ಜೋರ್ಜ್ ಕಾಲೇಜಿನ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ವಿಶ್ವನಾಥ ಶೆಟ್ಟಿ ಕೆ. , ಸಿ
ಆರ್ ಗಣೇಶ
ನಡುವಾಲು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ
ಮಲ್ಲಾರ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ
ಉಂಡಿಲ , ಅತಿಥಿಗಳಾಗಿ
ಭಾಗವಹಿಸಿದ್ದರು. ಶಿಬಿರಾಧಿಕಾರಿ ಕುಮಾರಿ ಮಲ್ಲಿಕಾ ಉದ್ದೇಶಿತ
ಚಟುವಟಿಕೆಗಳು ಮತ್ತು ಶಿಬಿರದ ದಿನಚರಿ ಮಾಹಿತಿ ನೀಡಿದರು. ಘಟಕದ ನಾಯಕ ಮೇಘನಾಥ, ನಾಯಕಿ ಯಶ್ವಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಳ್ಯ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಶೋಭಾವತಿ ಸ್ವಾಗತಿಸಿದರು,
ಕಾರ್ಯಕ್ರಮ ಅಧಿಕಾರಿ ಸಲೀನ್ ಕೆ.ಪಿ ವಂದಿಸಿದರು. ಸಹಾಯಕ ಕಾರ್ಯಕ್ರಮಾಧಿಕಾರಿ ಶ್ರೀಮತಿ ಲಾವಣ್ಯ ಹೇಮಂತ್ ಮಂಡೆಕರ ನಿರೂಪಿಸಿದರು.
ಸೆ.29
ರಂದು ಜನಪದ ಕಲಾವಿದ ಉಪನ್ಯಾಸಕ ಶೀನ ನಾಡೋಳಿ ಶೈಕ್ಷಣಿಕ ಉಪನ್ಯಾಸ ರಂಗಕಲೆ ಹಾಗೂ ಶಿಕ್ಷಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು ಸೆ.30 ರಂದು ಕಡಬ
ತಾಲೂಕು ಪತ್ರಕರ್ತರ ಸಂಘದಿಂದ ಮಾದ್ಯಮ ಸಂವಾದ ಕಾರ್ಯಕ್ರಮ
ನಡೆದಿದ್ದು ಸಂಘದ ಅಧ್ಯಕ್ಷ ನಾಗರಾಜ
ಎನ್ ,ಸ್ಥಾಪಕ ಅಧ್ಯಕ್ಷ ಕೆ,ಬಾಲಕೃಷ್ಣ ಕೊಯಿಲ,
ಸದಸ್ಯ ತಸ್ಲೀಂ
ಮರ್ಧಾಳ ಪಾಲ್ಗೊಂಡಿದ್ದರು.
ಅ.1ರಂದು ಆಧ್ಯಾತ್ಮಿಕ
ಶಿಕ್ಷಣ ವೆಂಕಟ್ರಮಣ ರಾವ್ ಮಂಕುಡೆ ನೈತಿಕ ಹಾಗೂ ಉಪನ್ಯಾಸ
ನೀಡಿದರು. ಅ.2ರಂದು ಗಾಂಧಿ ಜಯಂತಿ ಪಿಯುಸಿ ನಂತರ ಮುಂದೇನು ಎಂಬ ವಿಷಯದ ಕುರಿತು ಶ್ರೀಮತಿ
ವನಜಾ ಹೆಬ್ಬಾರ್ ಮಾಹಿತಿ ನೀಡಿದರು .ಅ.3 ರಂದು ಕುಡೂರು
ಡಾ. ರಾಮ್ ಪ್ರಕಾಶ್ ಅವರು ತನಕ
ಆರೋಗ್ಯ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.


ಶಿಬಿರದಲ್ಲಿ ನಡೆಸಿದ ಚಟುವಟಿಕೆಗಳು: ಶಾಲೆಯ ಜಾಗದಲ್ಲಿ 250 ಅಡಿಕೆ ಗುಂಡಿಗಳನ್ನು ತೆಗೆದು ಅಡಿಕೆ ಸಸಿ ನೆಟ್ಟು ಪೂರ್ಣಗೊಳಿಸಲಾಯಿತು. ಅಲ್ಲದೆ ಆಟದ ಮೈದಾನದ ದುರಸ್ತಿ, ಸಂಪರ್ಕ ರಸ್ತೆ ದುರಸ್ತಿ, ಶಾಲಾ ವಠಾರದ ಶುಚಿತ್ವ ಹಾಗೂ ಗಿಡ ನೆಡುವ ಕಾರ್ಯಕ್ರಮ ಮತ್ತು
ಪರಿಸರ ಸಂರಕ್ಷಣೆ, ಎರಡು ಅಂಗನವಾಡಿಗಳ
ಕಟ್ಟಡಗಳ ಸುತ್ತಮುತ್ತ ಶುಚಿತ್ವ ಮಾಡಲಾಗಿದೆ.
ಸಮಾರೋಪ ಸಮಾರಂಭ :ಶಿಬಿರದ ಸಮಾರೋಪ ಸಮಾರಂಭವು ಅ.4ರಂದು ಕಾಲೇಜಿನ
ಪ್ರಾಂಶುಪಾಲರಾದ ವಾಸುದೇವ
ಗೌಡ ಕೆ ಅವರ ಅಧ್ಯಕ್ಷತೆಯಲ್ಲಿ
ನಡೆಯಿತು. ರಜೆಯ ನಂತರ ಪರೀಕ್ಷೆಗಳು ನಿಗದಿಪಡಿಸಿದ ಕಾರಣ ವಿಶೇಷ ಶಿಬಿರ ನಡೆಸುವುದು ಕಷ್ಟವಾಯಿತು. ಬಹಳ ಕಡಿಮೆ ಅವಧಿಯಲ್ಲಿ ಕ್ಷಿಪ್ರವಾಗಿ ಶಿಬಿರ ಆಯೋಜಿಸಿದ ಕಾರ್ಯಕ್ರಮಾಧಿಕಾರಿ ಸಲೀನ್
ಕೆ.ಪಿ ಯವರ ಶ್ರಮವನ್ನು
ಪಾರಂಶುಪಾಲರು ಪ್ರಶಂಸಿದರು
. ಕಡಬ ಮೆಸ್ಕಾಂ ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಸಮಾರೋಪ ಭಾಷಣ ಮಾಡಿದರು. ಅತಿಥಿಗಳಾಗಿ
ಸರ್ಕಾರಿ ಪ್ರೌಢ ಶಾಲೆಯ ಉಪಪ್ರಾಂಶುಪಾಲೆ ಡಾ.ವೇದಾವತಿ ಕೆ.ಇ.ಎಸ್, ನಿವೃತ್ತ ಶಿಕ್ಷಕ ಜನಾರ್ದನ
ಗೌಡ ಪಣೆಮಜಲು , ಜಯಚಂದ್ರ
ರೈ ಕುಂಟೋಡಿ, ಮೊದಲಾದವರು ಶಿಬಿರದ ಆಯೋಜನೆ ಶಿಬಿರಾರ್ಥಿಗಳ ಶಿಸ್ತು, ಶ್ರಮದಾನ, ನಾಯಕತ್ವ ಗುಣಗಳನ್ನು ಪ್ರಶಂಸಿದರು.
ಗೋಗಟೆ ಶಿಬಿರದ ಯಶಸ್ಸಿಗೆ ಸಹಕರಿಸಿದ ಎಸ್.ಎಸ್ ಮೀಡಿಯಾದ ಸಂತೋಷ್ ಪಟ್ನ , ಯೋಗ
ತರಬೇತುದಾರೆ ಸ್ಪೂರ್ತಿ ವಿಜೇತ್ ಸೌಂಡ್ಸ್ ಮರ್ಧಾಳದ ವಿಜೇತ್ ಅವರನ್ನು
ಸನ್ಮಾನಿಸಲಾಯಿತು.ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾಲೇಜಿನ ಅತಿಥಿ ಉಪನ್ಯಾಸಕಿ
ಕುಮಾರಿ ಮಲ್ಲಿಕಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅತಿಥಿ ಉಪನ್ಯಾಸಕ
ನವೀನ್ ಎಸ್ ಎಸ್ ಸ್ವಾಗತಿಸಿದರು. ಸಹ ಕಾರ್ಯಕ್ರಮಾಧಿಕಾರಿ ಶ್ರೀಮತಿ ಲಾವಣ್ಯ
ಕೆ ಎಲ್ ಏಳು ದಿನಗಳ ಕಿರು ವರದಿಯನ್ನು ವಾಚಿಸಿದರು.
ಅತಿಥಿ
ಉಪನ್ಯಾಸಕಿ ಕುಮಾರಿ ಸುಮನ ಕಾರ್ಯಕ್ರಮ
ನಿರೂಪಿಸಿದರು. ಕಾರ್ಯಕ್ರಮಾಧಿಕಾರಿ
ಸಲೀನ್ ಕೆ.ಪಿ. .ಶಿಬಿರದ
ಯಶಸ್ಸಿಗೆ ಸಹಕರಿಸಿದವರಿಗೆಕೃತಜ್ಞತೆ ಸಲ್ಲಿಸಿದರು.

