ಕಡಬ ಟೈಮ್ಸ್, ಸುಬ್ರಹ್ಮಣ್ಯ:ಭಜನೆ ಹಾಡಿಗೆ ಮನಸೋಲದವರು ಯಾರು ಇಲ್ಲ,ಅದರ ಭಾವ ,ಲಯಕ್ಕೆ ಮೂಕವಿಸ್ಮಿತರಾಗುತ್ತಾರೆ.ಇದೀಗ ಸುಬ್ರಹ್ಮಣ್ಯ ಮಠದಲ್ಲಿ ಭಜನೆ ತಂಡವೊಂದು ಹಾಡಿದ ಹಾಡಿಗೆ ಮಠದ ಸ್ವಾಮೀಜಿ ತಲೆದೂಗಿದ್ದಾರೆ.






ಹೌದು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಗದಗದಿಂದ ಬಂದಿದ್ದ ಭಕ್ತರ ತಂಡ ಅಲ್ಲಲ್ಲಿ ಭಜನೆ ಹಾಡುತ್ತಿದ್ದರು. ನವ ರಾತ್ರಿಯ ಶುಭ ಸಂದರ್ಭದಲ್ಲಿ ಸರಸ್ವತಿ ಪೂಜೆಯ ದಿನ ಸುಬ್ರಹ್ಮಣ್ಯ ಮಠದಲ್ಲಿ ಈ ತಂಡಕ್ಕೆ ಭಜನೆ ಹಾಡಲು ಅವಕಾಶ ನೀಡಲಾಗಿತ್ತು.
ಮುಖ್ಯವಾಗಿ ಕನಕದಾಸರ” ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ…” ಹಾಡನ್ನು ಸ್ವಾಮೀಜಿ ಮುಂದೆ ಹಾಡಿದ್ದು ಈ ಹಾಡಿಗೆ ಸ್ವಾಮೀಜಿ ತಲೆದೂಗಿದ್ದಾರೆ. ಅಲ್ಲದೆ ಭಜನಾ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪರಂಪರಾಗತ ವಾಗಿ ಹಾಡುತ್ತಾ ಬರುವ ತಂಡ ಇದಾಗಿದ್ದು ಸ್ವಾಮೀಜಿಯವರು ಶಾಲು ಹೊದಿಸಿ ಅವರನ್ನು ಗೌರವಿಸಿದ್ದಾರೆ.ಮಠದ ಈ ಗೌರವಕ್ಕೆ ಭಜನಾ ತಂಡ ಹರ್ಷ ವ್ಯಕ್ತಪಡಿಸಿದೆ.