



ಬಲ್ಯ ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡದ ನೆರವು
ಕಡಬ :ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ
ಕುಟ್ರುಪ್ಪಾಡಿ ಗ್ರಾ.ಪಂ ಬಲ್ಯ ಗ್ರಾಮದ ಕುದ್ರಡ್ಕ ಎಂಬಲ್ಲಿ ಹೆದ್ದಾರಿ ಬದಿಯಲ್ಲಿದ್ದ ಅಪಾಯಕಾರಿ
ಮರದ ಕೊಂಬೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಾಕಾರದೊಂದಿಗೆ ಬಲ್ಯ ಶ್ರೀ ಉಮಾಮಹೇಶ್ವರಿ ಪರಿವರ್ತನಾ
ತಂಡದ ನೆರವಿರಲ್ಲಿ ತೆರವುಗೊಳಿಸಿದೆ.
![]() ![]() |
ಶ್ರೀ ಉಮಾಮಹೇಶ್ವರಿ ಪರಿವರ್ತನಾ ತಂಡದ ಸದಸ್ಯರು |


ವಾಹನ
ಸವಾರರಿಗೆ ಅಪಾಯಕಾರಿಯಾಗಿದ್ದ ಈ ಮರದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಬಂಧ ಪಟ್ಟ ಅಧಿಕಾರಿಗಳ
ಗಮನಸೆಳೆಯಲಾಗಿತ್ತು. ಅಧಿಕಾರಿಗಳ ಸೂಕ್ತ ಸಮಯಕ್ಕೆ ಸ್ಪಂದಿಸದ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಲಾಗಿತ್ತು
.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಸುದ್ದಿ ಗಮನಿಸಿ ಐತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್.ಕೆ ಅವರು ಸ್ಥಳೀಯರನ್ನು ಸಂಪರ್ಕಿಸಿದ್ದರು. ಬಳಿಕ ಸಂಬಂಧಿಸಿದ ಇಲಾಖೆಗೂ ಮಾಹಿತಿ ರವಾನಿಸಿದ್ದರು. ಹೀಗಾಗಿ ಅಪಾಯಕಾರಿಯಾಗಿದ್ದ ಮರದ ಕೊಂಬೆ ತೆಗೆದು ವಾಹನ ಸವಾರರು ನಿರಾಳರಾಗುವಂತೆ ಮಾಡಿದ್ದಾರೆ.
![]() ![]() |
ತೆರವುಗೊಳಿಸಿರುವ ಮರದ ಕೊಂಬೆ |


ಅಪಾಯಕಾರಿ
ಮರದ ಕೊಂಬೆ ತೆರವುಗೊಳಿಸಿ ವಾಹನ ಸವಾರರಿಗೆ ಬಲ್ಯ ಶ್ರೀ ಉಮಾಮಹೇಶ್ವರಿ ಪರಿವರ್ತನಾ
ತಂಡದ ಮುಂದಾಳು ಉಮೇಶ್ ಜಾಕಿ ಅವರು
ಕೃತಜ್ಞತೆ ಸಲ್ಲಿಸಿದ್ದಾರೆ . ಉಮಾಮಹೇಶ್ವರಿ ಪರಿವರ್ತನಾ ತಂಡದ ಸದಸ್ಯರು, ಅರಣ್ಯ ರಕ್ಷಕ ರವಿಕುಮಾರ್
ಸಹಕರಿಸಿದರು .