28.4 C
Kadaba
Wednesday, March 19, 2025

ಹೊಸ ಸುದ್ದಿಗಳು

ಕಡಬ: ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿ ವಿಷ ಕುಡಿದು ಅಸ್ಪಸ್ಥಗೊಂಡು ಚಿಕಿತ್ಸೆ ಫಲಿಸದೆ ಮೃತ್ಯು

Must read

 

kadabatimes.in

kadabatimes.in
ಬೆತ್ತೋಡಿ ನಿವಾಸಿ ಪರಮಶಿವಂ (65ವ)

ಕಡಬ:  ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮಾನಸಿಕವಾಗಿ
ನೊಂದು ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು
ಚಿಕಿತ್ಸೆ ಫಲಿಸದೆ ಮೃಟಪಟ್ಟ ಬಗ್ಗೆ ವರದಿಯಾಗಿದೆ.


ಐತ್ತೂರು ಗ್ರಾಮ ಪಂಚಾಯತ್
ವ್ಯಾಪ್ತಿಯ  ಬೆತ್ತೋಡಿ ನಿವಾಸಿ ಪರಮಶಿವಂ (65ವ) ಮೃತಪಟ್ಟ
ವ್ಯಕ್ತಿ.


kadabatimes.in

 ಕೃಷಿ ಕೆಲಸ ಮಾಡಿಕೊಂಡಿದ್ದ ಇವರು ಇತ್ತೀಚೆಗೆ ಹೊಟ್ಟೆನೋವಿನಿಂದ
ಬಳಲುತ್ತಿದ್ದು ಮಾನಸಿಕವಾಗಿ ಅ.12ರಂದು ಆಜನ ಎಂಬಲ್ಲಿರುವ ತೋಟದಲ್ಲಿ ಸಂಜೆ ಯಾವುದೋ ವಿಷ ಪದಾರ್ಥ
ಸೇವಿಸಿ ಅಸ್ವಸ್ಥರಾಗಿದ್ದರು.


ಕೂಡಲೇ ಮನೆ ಮಂದಿ ಕಡಬ
 ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ
ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿನ 
ಖಾಸಗಿ
ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದರು.
ಬಳಿಕ 
.ಸಿ.ಯು ನಲ್ಲಿದ್ದ
ಕಾರಣ
 ವೈದ್ಯರ ಸಲಹೆ ಮೇರೆಗೆ
ಅ.16ರಂದು
 ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.


ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದಿದ್ದ ಕಾರಣ ವೈದ್ಯರ ಸಲಹೆ ಮೇರೆಗೆ
ಅ.17 ರಂದು
 ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ಮನೆಗೆ ಕರೆದುಕೊಂಡು ಬರುತ್ತಿರುವಾಗ ದಾರಿ ಮಧ್ಯೆ  ಮೃತಪಟ್ಟಿರುವುದಾಗಿ ಕಡಬ ಪೊಲೀಸರಿಗೆ
ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೃತರ ಮಗ ನಾಗರಾಜ ಎಮ್  ಎಂಬವರು ನೀಡಿದ ದೂರಿನ ಮೇರೆಗೆ  ಕಡಬ
ಪೊಲೀಸ್‌‌ ಠಾಣಾ ಯು ಡಿ ಆರ್ನಂಬ್ರ 35/2024 ಕಲಂ:194 BNSS-2023 ಯಂತೆ ಪ್ರಕರಣ ದಾಖಲಾಗಿದೆ.

kadabatimes.in