

![]() ![]() |
ಮುರಿದು ಬಿದ್ದಿರುವ ತೂಗು ಸೇತುವೆಯ ದೃಶ್ಯ |


ಕಡಬ ಟೈಮ್,ಸುಳ್ಯ: ಶಿಥಿಲಗೊಂಡ ತೂಗು ಸೇತುವೆಯಿಂದ ಬಿದ್ದು ಮೂವರು ಗಾಯಗೊಂಡ
ಘಟನೆ ಅ.17 ರಂದು ನಡೆದಿರುವ ಬಗ್ಗೆ ಸುಳ್ಯದ ಅರಂತೋಡು ಗ್ರಾಮದಿಂದ ವರದಿಯಾಗಿದೆ.
ಅರಂತೋಡು ಗ್ರಾಮದ ಅರಮನೆಗಯ
ತೂಗು ಸೇತುವೆಯಲ್ಲಿ ಈ ಘಟನೆ ರಾತ್ರಿ ವೇಳೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಏಕಾಏಕಿ ಮರಕ್ಕೆ ಕಟ್ಟಿದ ರೋಪ್ ತುಂಡಾಗಿದೆ.


ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಅರಮನೆಗಯ ಅವರು ಸೇತುವೆಯಿಂದ ಕೆಳಗಡೆ ಬಿದ್ದಿದ್ದಾರೆ. ಪರಿಣಾಮವಾಗಿ ಓರ್ವನ
ಕೈಗೆ ಗಂಭೀರ ಏಟು ತಗುಲಿದೆ. ತೇಜುಮಾರ್ ಎಂಬವರು ರೋಪ್ ನಲ್ಲಿ ನೇತಾಡಿಕೊಂಡು ಅಲ್ಪ ಸ್ವಲ್ಪ ಗಾಯದಿಂದ ಪಾರಾಗಿದ್ದಾರೆ. ಮತ್ತೋರ್ವ
ಅಲ್ಪಸ್ವಲ್ಪ ಗಾಯಗಳಾಗಿದೆ.
ಮೂವರು ಸುಳ್ಯದ
ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸದ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ದೋರಣೆಯ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

