

![]() ![]() |
ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿರುವ ಕೇಶವ ತಿವಾರಿ |


ಪಂಜ:ಬಾಡಿಗೆ
ಮನೆಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ರೂಂ ಮುಂಭಾಗ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ
ಅ.18 ಶುಕ್ರವಾರ ಪಂಜದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.


ಮರಿಯ ಮಹಲ್ ನಲ್ಲಿ ಬಾಡಿಗೆ ರೂಮ್ ನಲ್ಲಿ ವಾಸವಾಗಿದ್ದ ಬೆಂಗಳೂರಿನ
ಕೇಶವ ತಿವಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.


ಅವರು
ಕೆಲವು ಸಮಯಗಳಿಂದ ಬಾಡಿಗೆ ರೂಮ್ ನಲ್ಲಿದ್ದು ಆನ್ ಲೈನ್ ಉದ್ಯೋಗ ನಡೆಸುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿರುವುದಾಗಿ ತಿಳಿದು ಬಂದಿದೆ.