28.4 C
Kadaba
Wednesday, March 19, 2025

ಹೊಸ ಸುದ್ದಿಗಳು

ಕಡಬದಿಂದ ಸುಳ್ಯಕ್ಕೆ ಅಕ್ರಮ ಗೋ ಸಾಗಾಟ:ವಾಹನ ಸಹಿತ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದ ಪೊಲೀಸರು

Must read

 

kadabatimes.in
ವಾಹನದಲ್ಲಿ ಗೋವುಗಳಿರುವ ಚಿತ್ರ(KADABA TIMES)


kadabatimes.in

ಕಡಬ:  ರಾತ್ರಿ ವೇಳೆ ಕಡಬದಿಂದ ಸುಳ್ಯದತ್ತ  ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ
ವಾಹನವನ್ನು ಸುಳ್ಯ ಬಳಿ ತಡೆದು ಪೊಲೀಸರಿಗೆ ಒಪ್ಪಿಸಿರುವ
ಘಟನೆ ವರದಿಯಾಗಿದೆ.


ಮೊಗರ್ಪಣೆ
ಮಸೀದಿ ಬಳಿ ಹಿಂದೂಪರ ಸಂಘಟನೆಯವರು  ತಡೆದಿದ್ದಾರೆ. ವಾಹನದಲ್ಲಿ ಎರಡಕ್ಕೂ ಹೆಚ್ಚು ಗೋವುಗಳಿದ್ದವು, ಅದನ್ನು ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

kadabatimes.in


ವಾಹನದಲ್ಲಿದ್ದ
ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ.
ವಿಚಾರಣೆ
ನಡೆಸಿದಾಗ ವಾಹನದಲ್ಲಿ ಮೈಸೂರಿನಿಂದ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಬಂದಿದ್ದ ಯಾತ್ರಿಕರು ಕಡಬದಿಂದ ಗೋವುಗಳನ್ನು ಖರೀದಿಸಿ ತಮ್ಮೂರಿಗೆ ಕರೆದೊಯ್ಯಲು ಹೊರಟಿದ್ದರೆಂದು ತಿಳಿದು ಬಂದಿದೆ.

ಅದಕ್ಕೆ
ಬೇಕಾದ ದಾಖಲೆಗಳೆಲ್ಲವೂ ಅವರ ಬಳಿ ಇದ್ದುದರಿಂದ ವಿಚಾರಣೆ ನಡೆಸಿ ಅವರನ್ನು ಬಿಡಲಾಗಿದೆ ಎಂದು ತಿಳಿದು ಬಂದಿದೆ.

kadabatimes.in