![]() ![]() |
photo credit: kadaba times |


ಕಡಬ : ಇಲ್ಲಿನ
ರೆಂಜಿಲಾಡಿ ಗ್ರಾಮದ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲ ವತಿಯಿಂದ ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಸ್ಥರ ಸಹಕಾರದೊಂದಿಗೆ ತುಳುನಾಡ ತುಡರ್ ಯುವಕ ಮಂಡಲದ ಮೂರನೇ ವರ್ಷದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಸಬ್ ಜೂನಿಯರ್ ವಿಭಾಗದ ನೇಗಿಲು ಕಿರಿಯ ಮತ್ತು ಜೂನಿಯರ್ ವಿಭಾಗದ ಹಗ್ಗ ಕಿರಿಯ ಮಟ್ಟದ ಕೆಸರು ಗದ್ದೆಯ ಸೂರ್ಯ–ಚಂದ್ರ ಜೋಡುಕರೆ ಕಂಬಳ ಸ್ನೇಹಕೂಟ ಕಾರ್ಯಕ್ರಮ ಅ.20
ರಂದು ಬೆಳಗ್ಗೆ ಗಂಟೆ 9
ರಿಂದ ರೆಂಜಿಲಾಡಿ ಗ್ರಾಮದ ದಿ|ಆರ್.ಸಾಂತಪ್ಪ ಗೌಡ ಸಾಕೋಟೆಜಾಲು ಅವರ ಗದ್ದೆಯಲ್ಲಿ ನಡೆಯಲಿದೆ.


ಬೆಳಗ್ಗೆ 9
ಗಂಟೆಗೆ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಅರ್ಚಕ ಕೃಷ್ಣ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸುವರು. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಕಂಬಳ ಕರೆ ಉದ್ಘಾಟಿಸುವರು. ತುಳುನಾಡ ತುಡರ್ ಯುವಕ ಮಂಡಲದ ಅಧ್ಯಕ್ಷ ತಿರುಲೇಶ್ವರ ಸಾಕೋಟೆಜಾಲು ಅಧ್ಯಕ್ಷತೆ ವಹಿಸುವರು.


ಸಂಜೆ 3 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ತಿರುಮಲೇಶ್ವರ ಸಾಕೋಟೆಜಾಲು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಸೇರಿದಂತೆ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಯುವ ಕಂಬಳ ಓಟಗಾರ ಕೃತಿಕ್ ಪೆರಂಗಲ್, ಹಿರಿಯ ಕಂಬಳ ಓಟಗಾರ ರವಿರಾಜ್ ಜೈನ್ ಹೇರ ಅವರನ್ನು ಸಮ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

