

![]() ![]() |
ಪೊಲೀಸರು ವಶಕ್ಕೆ ಪಡೆದಿರುವ ವಾಹನ |


ಕಡಬ:
ಮಳೆಗಾಲ ಕಡಿಮೆಯಾಗುತ್ತಿದ್ದಂತೆಯೇ ಠಾಣಾ ವ್ಯಾಪ್ತಿಯ ಅಲ್ಲಲ್ಲಿ ಅಕ್ರಮ ಮರಳು ದಂಧೆ ಆರಂಭವಾಗಿದೆ.ಇದೀಗ
ಬಿಳಿನೆಲೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಹೈಟೆಕ್ ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ದಾಳಿ ಮಾಡಿದ್ದು ಒಂದು
ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಬಿಳಿನೆಲೆ
ಬೈಲು ಎಂಬಲ್ಲಿನ ತಿಮ್ಮಡ್ಕ ಎಂಬಲ್ಲಿ ಹಗಲು ರಾತ್ರಿ
ಎನ್ನದೆ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಾಟ ನಡೆಸಲಾಗುತ್ತಿತ್ತು. ಈ ಘಟನೆಗೆ ಸಂಬಂಧಿಸಿ ಸುಮಂತ್
ಎಂಬವರಿಗೆ ಸೇರಿದ ವಾಹನವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಲಾಗಿದೆ. ಗಣಿ ಇಲಾಖೆಯ ಅಧಿಕಾರಿಗಳು
ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.ಪೊಲೀಸರು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.


ಕಡಬ
ತಹಶೀಲ್ದಾರ್, ಗಣಿ ಇಲಾಖೆ, ಪೊಲೀಸ್ ಇಲಾಖೆಯ ಒಟ್ಟಾಗಿ ದಾಳಿ ಮಾಡಿರುವುದಾಗಿ ಮಾಹಿತಿ ಲಭಿಸಿದೆ. ತೋಟದ
ಮೂಲಕ ಲಾರಿ, ಟಿಪ್ಪರ್ ಗಳು, ಇಟಾಚಿಗಳು ಯಾರ ಭಯವೂ ಇಲ್ಲದೆ ಸಂಚರಿಸುತ್ತಿತ್ತು.
ಹೊಳೆಯಿಂದ
ಹೂಳೆತ್ತುವ ಸಲುವಾಗಿ ಅನುಮತಿ ಪಡೆದುಕೊಂಡು ಹಿಂದಿ ಭಾಷಿಕ ಕಾರ್ಮಿಕರನ್ನು ಬಳಸಿಕೊಂಡು ರಾತ್ರಿ ಹಗಲು ಅಕ್ರಮ ಮರಾಟ ಮಾಡುತ್ತಿರುವ ಆರೋಪ ಇವರ ಮೇಲಿದೆ.
ಇಲ್ಲಿ ಮರಳುಗಾರಿಕೆ ನಡೆಯುವುದರಿಂದ ಈ ಭಾಗದ ಕೃಷಿಕರಿಗೆ
ನೀರಿನ ಸಂಕಷ್ಟ ಎದುರುರಾಗಿದೆ.

