

![]() ![]() |
ಚಿರತೆಗಳ ಹೆಜ್ಜೆ ಗುರುತು(Kadaba Times) |


ಕಡಬ/ಪಂಜ : ಇಲ್ಲಿನ ಪಂಜ ಪರಿಸರದ ಮೂರು ಕಡೆಗಳಲ್ಲಿ ಕೆಲವು ದಿನಗಳಿಂದ ಬೇರೆ ಬೇರೆ ಕಡೆ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ.
ಪಂಜ ಸಮೀಪದ ಬಸ್ತಿಕಾಡು ಪರಿಸರದಲ್ಲಿ ಅ.18 ರಂದು ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ.ಪಂಜ ಹೊಳೆ ದಾಟಿ ಬಸ್ತಿಕಾಡು ಮೂಲಕ ಪಲ್ಲತ್ತಡ್ಕ ಕಡೆ ಹೋಗಿರುವ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಅಲ್ಲಿಯೇ ಪಕ್ಕದ ಚಾಳೆಗುಳಿ ಎಂಬಲ್ಲಿ ಕೂಡ ಹೆಜ್ಜೆ ಗುರುತು ಇರುವುದಾಗಿ ತಿಳಿದು ಬಂದಿದೆ.


ಅ.16 ರಂದು ಮುಂಜಾನೆ ಕೂತ್ಕಂಜ ಗ್ರಾಮದ ಗ್ರಾಮದ ಕುದ್ವ ಎಂಬಲ್ಲಿ ತೋಟದಲ್ಲಿ ಹಲವು ಕಡೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಮರುದಿನ ಪಂಜ ಸಮೀಪದ ಕುದ್ಮಾರು ಬೆಟ್ಟು ಎಂಬಲ್ಲಿ ತೋಟದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿತ್ತು.
ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

