

![]() ![]() |
ಆಲಂಕಾರಿನಲ್ಲಿ ಪೊಲೀಸರು ಅಂಗಡಿ ಪರಿಶೀಲನೆ ಮಾಡುತ್ತಿರುವುದು |


ಕಡಬ:
ವಿಧಾನ ಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಪ್ರತಿ ಗ್ರಾ.ಪಂ ಗೆ ಬಿಗಿ
ಬಂದೋಬಸ್ತ್ ನೀಡುತ್ತಿದ್ದಾರೆ. ಅಲ್ಲದೆ ಎಸ್.ಐ ನೇತೃತ್ವದ
ಪೊಲೀಸರು ಗಸ್ತುನಿರತರಾಗಿದ್ದಾರೆ.


ಈ
ಸಂದರ್ಭದಲ್ಲಿ ಮುಂಜಾನೆ ವೇಳೆ ಆಲಂಕಾರು ಪೇಟೆಯ ಬಾರ್ ಪಕ್ಕದಲ್ಲಿರುವ ಸ್ಟೋರ್ ಮುಂದುಗಡೆ ಜನರ ಜಮಾವಣೆಯನ್ನು ಗಮನಿಸಿದ್ದಾರೆ.


ಪೊಲೀಸರ
ತಂಡ ಮದ್ಯ ಮಾರಾಟದ ಶಂಕೆಯ ಮೇಲೆ ಅಂಗಡಿಯನ್ನು
ಪರಿಶೀಲನೆ ನಡೆಸಿದ್ದು ಈ
ಸಂದರ್ಭದಲ್ಲಿ ಅಂಗಡಿಯಲ್ಲಿ ದೈನಂದಿನ ಬಳಕೆಗೆ ಉಪಯೋಗಿಸಿದ ಮದ್ಯದ ಪ್ಯಾಕೇಟ್ ಮತ್ತು ಗ್ಲಾಸ್ ಪತ್ತೆಯಾಗಿದೆ. ಅನಗತ್ಯವಾಗಿ
ಜನ ಸೇರದಂತೆ ಪೊಲೀಸರು ಸೂಚಿಸಿ ತೆರಳಿರುವುದಾಗಿ ತಿಳಿದು
ಬಂದಿದೆ.