25.7 C
Kadaba
Wednesday, March 19, 2025

ಹೊಸ ಸುದ್ದಿಗಳು

ಕೊಂಬಾರಿನಲ್ಲಿ ನೂತನ ಮೊಗೇರ ಗ್ರಾಮ ಸಮಿತಿ ರಚನೆ : ಪದಾಧಿಕಾರಿಗಳ ವಿವರ ಇಲ್ಲಿದೆ

Must read

kadabatimes.in

kadabatimes.in
ಹಿರಿಯರಾದ ಮಾಂಕು ಮೊಗೇರ ಉದ್ಘಾಟಿಸುತ್ತಿರುವುದು


ಕಡಬ:
ಇಲ್ಲಿನ ಕೊಂಬಾರು ಗ್ರಾಮದಲ್ಲಿ  ತಾಲೂಕು
ಮೊಗೇರ ಸಂಘದ ನೇತೃತ್ವದಲ್ಲಿ  ನೂತನ
ಮೊಗೇರ ಗ್ರಾಮ ಸಮಿತಿ ಪದಾಧಿಕಾರಿಗಳ ಆಯ್ಕೆಯು ಕೆಂಜಾಳದ  ಪಂಚಲಿಂಗೇಶ್ವರ
ಯುವಕ ಮಂಡಲ ಸಭಾಭವನದಲ್ಲಿ .20ರಂದು ನಡೆಯಿತು.


ಈ ಸುದ್ದಿಯನ್ನು ಓದಿರಿ:  ಕಡಬ: ಮದ್ಯ ಮಾರಾಟದ ಶಂಕೆಯಲ್ಲಿ ದಿಢೀರ್ ಅಂಗಡಿ ಪರಿಶೀಲನೆ ನಡೆಸಿದ ಪೊಲೀಸರು


ತಾಲೂಕು
ಮೊಗೇರ ಸಂಘದ ಅಧ್ಯಕ್ಷ  ಶಶಿಧರ್
ಬೊಟ್ಟಡ್ಕ  ಅಧ್ಯಕ್ಷತೆಯಲ್ಲಿ
ನಡೆದ  
ಕಾರ್ಯಕ್ರಮದಲ್ಲಿ ಹಿರಿಯರಾದ
ಮಾಂಕು
ಮೊಗೇರ ಅವರು ಉದ್ಘಾಟಿಸಿದರು.

kadabatimes.in


ಕೊಂಬಾರು
ಮೊಗೇರ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಕಮಲಾಕ್ಷ ಬೊಟ್ಟಡ್ಕ, ಉಪಾಧ್ಯಕ್ಷರಾಗಿ ಕಿಟ್ಟು ಬೊಟ್ಟಡ್ಕ, ಕಾರ್ಯದರ್ಶಿಯಾಗಿ ರೇವತಿ ಬೀಡು, ಕೋಶಾಧಿಕಾರಿಯಾಗಿ ತನಿಯಪ್ಪ ಬೊಟ್ಟಡ್ಕ ಆಯ್ಕೆಯಾದರು. ಇದೇ ವೇಳೆ   ಮೊಗೇರ
ಸಮುದಾಯದ  ಪ್ರತೀ ಮನೆಯ
ಮಾಹಿತಿ ಸಂಗ್ರಹದ ಉದ್ದೇಶದ  ನಮೂನೆಯನ್ನು
ಬಿಡುಗಡೆ ಮಾಡಲಾಯಿತು.

ಆಯ್ಕೆಯಾದ ಮೊಗೇರ  ಗ್ರಾಮ ಸಮಿತಿಯ ಪದಾಧಿಕಾರಿಗಳು


ಸಮುದಾಯ ಸಂಘಟನೆಯ ಮುಂದಾಳುಗಳಾದ  , ವಿಜಯ್ ವಿಕ್ರಂ ಗಾಂಧಿಪೇಟೆ, ರವಿಚಂದ್ರ ಪಡುಬೆಟ್ಟು,ಆಲಂಕಾರು ಮೊಗೇರ ಸಂಘದ ಅಧ್ಯಕ್ಷ  ಬಾಲಕೃಷ್ಣ
ಕೇಪುಳು ಸೇರಿದಂತೆ ಪ್ರಮುಖರು ಸಲಹೆ
ಸೂಚನೆ ನೀಡಿದರು.


ಸುಳ್ಯ
ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತಡ್ಕರವರು  ಅಂಬೇಡ್ಕರ್
ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಮಾಹಿತಿ ನೀಡಿದರು.
ಪ್ರಮುಖರಾದ  ಗೋಪಾಲ್
ಬೀಡು, ಜನಾರ್ದನ ಬೊಟ್ಟಡ್ಕ, ವಸಂತ ಕುಬಲಾಡಿ, ಮಹೇಶ್ ಕೊಕ್ಕಡ, ಸಂದೀಪ್ ಪಾಂಜೋಡಿ, ಸುರೇಶ್ ತೋಟಂತಿಲ, ಶೀನ ದೇರೋಡಿ, ಕೆ ಪಿ ಆನಂದ  ಉಪಸ್ಥಿತರಿದ್ದರು. ದಯಾನಂದ ಮಿತ್ತ ಬೈಲು ಕಾರ್ಯಕ್ರಮ ನಿರ್ವಹಿಸಿದರು.


kadabatimes.in