24.5 C
Kadaba
Thursday, March 20, 2025

ಹೊಸ ಸುದ್ದಿಗಳು

ಆಲಂಕಾರು ಗ್ರಾಮದಲ್ಲಿ ಹುಲಿ ಬಂತೆಂಬ ವದಂತಿ: ಅರಣ್ಯಾಧಿಕಾರಿಗಳ ಭೇಟಿ

Must read

ಕಾಡು ಪ್ರಾಣಿಯ ಹೆಜ್ಜೆ ಗುರುತು (KADABA TIMES)


kadabatimes.in

 ಕಡಬ:
ಇಲ್ಲಿನ
  ಆಲಂಕಾರು ಗ್ರಾಮದ ನೆಕ್ಕಿಲಾಡಿ ಬೈಲಿನಲ್ಲಿ
ಮಂಗಳವಾರ ಮುಂಜಾನೆ
  ಚಿರತೆಯನ್ನು ಹೋಲುವ  ಕಾಡು ಪ್ರಾಣಿಯೊಂದು ಸ್ಥಳೀಯರಿಗೆ
ಕಾಣಸಿಕ್ಕಿದ್ದು  ಹುಲಿ ಬಂದಿದೆಯೆಂದು ಸುದ್ದಿಯಾಗಿದ್ದು ಸ್ಥಳೀಯರು ಭಯಭೀತಗೊಂಡ ಘಟನೆ ವರದಿಯಾಗಿದೆ.

kadabatimes.in


 ನೆಕ್ಕಿಲಾಡಿಬೈಲು ನೈಯಲ್ಗ
ನಿವಾಸಿ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪ ಕಾಡುಪ್ರಾಣಿ ಕಂಡು ಬಂದಿದ್ದು
ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪ್ರಾಣಿಯನ್ನು ಕಣ್ಣಾರೆ ಕಂಡವರು ಯಾರು ಇಲ್ಲ ಎಂಬ ಮಾಹಿತಿ ಕಡಬ ಟೈಮ್ಸ್ ಗೆ ಲಭ್ಯವಾಗಿದೆ.


kadabatimes.in

ಹುಲಿ ವದಂತಿಯ ಹಿನ್ನೆಲೆಯಲ್ಲಿ  ಸ್ಥಳಕ್ಕೆ
ಉಪ ವಲಯ ಅರಣ್ಯಾಧಿಕಾರಿಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿಲನೆ ನಡೆಸಿದ್ದಾರೆ.


ಸ್ಥಳದಲ್ಲಿ
ಕಾಡು ಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದ್ದು, ಚಿರತೆಯೇ ಅಥವಾ ಬೇರೆ ಪ್ರಾಣಿಯೇ ಎಂಬುದರ
ಬಗ್ಗೆ
 ಪರಿಶೀಲನೆಯ ಬಳಿಕ
ತಿಳಿದು ಬರಬೇಕಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.


kadabatimes.in