



ಕಡಬ ಟೈಮ್, ಆಲಂಕಾರು: ಕಡಬ ತಾಲೂಕು ಆಲಂಕಾರು
ಗ್ರಾಮದ ನೆಕ್ಕಿಲಾಡಿ ನೈಯ್ಯಲ್ಗ ಪರಿಸರದಲ್ಲಿ ಮಂಗಳವಾರ ಬೆಳಿಗ್ಗಿನ ಜಾವ ವ್ಯಕ್ತಿಯೋರ್ವರಿಗೆ ಹುಲಿ
ಕಾಣಿಸಿಕೊಂಡಿದೆ ಎನ್ನುವ ಮಾಹಿತಿಯಿಂದ ಪರಿಸರದ ಜನ
ಆತಂಕಕ್ಕಿಡಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯವರು ಹೆಜ್ಜೆ ಗುರುತು ಪತ್ತೆಯಚ್ಚಿ ಪರಿಶೀಲನೆ
ನಡೆಸಿದ್ದು ದೊಡ್ಡದಾದ ಚಿರತೆಯ ಹೆಜ್ಜೆಯಾಗಿರಬಹುದೆಂದು ಅಂದಾಜಿಸಿದ್ದಾರೆ.
ಘಟನೆ ವಿವರ: ನೈಯಲ್ಗ ಜನಾರ್ದನ
ಬಂಗೇರ ಅವರು ತನ್ನ ಮನೆ ಸಮೀಪವಿರುವ ತನ್ನ ದೈವದ ಬನದಲ್ಲಿ
ದೀಪ ಹಚ್ಚುತ್ತಿದ್ದ ವೇಳೆ ಸುಮಾರು ಮೂರು ಮೀಟರ್ ಅಂತರದಲ್ಲಿ ಹುಲಿಯನ್ನೇ ಹೋಲುವ ಪ್ರಾಣಿ ಕಾಣಿಸಿಕೊಂಡಿದೆ
. ಪೂಜೆ ಮಾಡುತ್ತಿದ್ದ ವೇಳೆ ಶಬ್ದವೊಂದು ಕೇಳಿದ ಕಡೆ
ನೋಡಿದಾಗ ಹುಲಿ ಕಾಣಿಸಿದ್ದು ಕೆಲ ಕಾಲ ಅಲ್ಲೆ ಇದ್ದ ಹುಲಿ ಬಳಿಕ ಅಲ್ಲಿಂದ ಹಾರಿ ಪರಾರಿಯಾಗಿದೆ.
ಇದಕ್ಕೂ ಮೊದಲು ತನ್ನ ಹಟ್ಟಿಯಲ್ಲಿದ್ದ ದನಗಳು ಕೂಗಿಕೊಂಡಿತ್ತು,
ಮನೆ ಮಂದಿ ಪರಿಶೀಲಿಸಿದಾಗ ಒಂದು ದನ ಕುಸಿದು ಬದ್ದಿತ್ತು . ತಕ್ಷಣ ದನದ ಹಗ್ಗ ಬಿಚ್ಚಿ ಬಿಡಲಾಗಿತ್ತು. ಎಂದು ಸ್ಥಳಕ್ಕೆ ಬಂದ ಅರಣ್ಯ ಆಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.


ಮಾಹಿತಿ ಪಡೆದ ಅಧಿಕಾರಿಗಳು ಚಿರತೆಯಾಗಿರಬಹುದೆನ್ನುವ
ಅನುಮಾನ ವ್ಯಕ್ತಪಡಿಸಿದರು. ಆದರೆ ಜನಾರ್ದನ ಬಂಗೇರ ಅವರು ಅಲ್ಲಗಳೆದಿದ್ದಾರೆ. ಚಿರತೆಯ ಸ್ಪಷ್ಟ ಚಿತ್ರಣ
ನಾನು ಕಂಡಿದ್ದೇನೆ. ಆದರೆ ನಾನು ನೊಡಿದ ಪ್ರಾಣಿಯು
ಹುಲಿಯ ಬಣ್ಣವನ್ನೆ ಹೊಳತ್ತಿತ್ತು ಎಂದು ವಾದಿಸಿದ್ದಾರೆ. ಬಳಿಕ ಅಧಿಕಾರಿಗಳು ಹೆಜ್ಜೆ ಗುರುತು ಆದರಿಸಿ ಪರಿಶೀಲನೆ ನಡೆಸಿದ್ದಾರೆ.
ಸುಮಾರು ಅರ್ದ ಕಿಮೀ ನಷ್ಟು ದೂರ
ಸಾಗಿದಾಗ ಅಲ್ಲಲ್ಲಿ ಹೆಜ್ಜೆ ಗುರುತು ಕಂಡು ಬಂದಿದೆ.
ಕುಂಡಾಜೆ ಪರಿಸರದಲ್ಲಿ ರಸ್ತೆಯೊಂದು ಅಡ್ಡವಾದ
ಕಾರಣ ಬಳಿಕ ಹೆಜ್ಜೆ ಗುರುತು ಕಾಣಿಸಿಲ್ಲ ಕುಂತೂರು
ಶಾಖಾ ಉಪ ವಲಯ ಅರಣ್ಯ ಅಧಿಕಾರಿ
ಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್
ಅವರಿಗೆ ಪರಿಸರದ ಜನ ಪರಿಶೀಲನೆಗೆ ಸಾಥ್ ನೀಡಿದರು.
ನೈಯಲ್ಗದಲ್ಲಿ ಕಂಡು ಬಂದಿರುವ ಪ್ರಾಣಿಯ ಬಗ್ಗೆ ಹುಲಿಯೆಂದು
ಸ್ಪಷ್ಟ ಪಡಿಸಲು ಸಾಧ್ಯವಿಲ್ಲ, ಹುಲಿ ಗುಂಪಾಗಿ ವಾಸಿಸುವ
ಪ್ರಾಣಿ, ಇಲ್ಲಿ ಕಂಡು ಬಂದಿದ್ದು ಒಂದೇ ಪ್ರಾಣಿ, ಹೆಜ್ಜೆ ಗುರುತು ದೊಡ್ಡದಾಗಿದೆ ಎನ್ನಲಾಗಿದೆ ಇದು ದೊಡ್ಡ ಚಿರತೆಯ ಗುರುತು ಆಗಿರಬಹುದು, ಸ್ಥಳಿಯರೊಬ್ಬರು ಈ ಪ್ರಾಣಿಯು ಬಗ್ಗೆ ನೀಡಿದ ಮಾಹಿತಿಯಲ್ಲಿ
ಹುಲಿಯದ್ದು ಎಂದು ಹೋಲಿಕೆಯಾಗುತ್ತಿದ್ದರೂ ಹುಲಿಯೆಂದು ಸ್ಪಷ್ಟ ಪಡಿಸಲು ಸಾಧ್ಯವಿಲ್ಲ. ನೈಯಲ್ಗ ಪರಿಸರದ ಪಕ್ಕದಲ್ಲಿ ಹರಿಯುವ ಕುಮಾರಧಾರ ನದಿಯ ಇನ್ನೊಂದು ಭಾಗವಾದ
ದೋಲ್ಪಾಡಿ ವ್ಯಾಪ್ತಿಯ ಪೈಕ ಕಾಡಿನಲ್ಲೂ ಸೋಮವಾರ ದೊಡ್ಡದಾದ
ಹೆಜ್ಜೆ ಗುರುತು ಪತ್ತೆಯಾದ ಬಗ್ಗೆ ಮಾಹಿತಿ ಲಭಿಸಿದೆ.


ಬಳಿಕ ಮಂಗಳವಾರ ಬೆಳಿಗ್ಗೆ ನದಿಯ
ಈ ಭಾಗದ ಶರವೂರು ಪರಿಸರದಲ್ಲಿ ಮುಂಜಾವಿನಲ್ಲಿ ರಬ್ಬರ್
ಟ್ಯಾಪಿಂಗ್‌ಗೆ ತೆರಳಿದವರಿಗೂ ಹೆಜ್ಜೆ ಗುರುತು ಕಾಣಿಸಿಕೊಂಡಿದೆ . ಇದಾದ ಕೆಲ ಗಂಟೆಗಳ ಬಳಿಕ ನೈಯಲ್ಗದಲ್ಲಿ
ಪ್ರಾಣಿ ಕಾಣಿಸಿಕೊಂಡಿದೆ. ನೈಯಲ್ಗದಿಂದ ಕುಂಡಾಜೆ ತನಕ
ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಬಳಿಕ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಚಿರತೆ ಸಂಚಾರಿ
ಪ್ರಾಣಿಯಾಗಿದೆ. ಹಾಗಾಗಿ ಕಾಣಿಸಿಕೊಂಡಲ್ಲಿ ತಕ್ಷಣ
ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಜನ ಆತಂಕಪಡುವ ಅಗತ್ಯವಿಲ್ಲ ಎಚ್ಚರದಿಂದಿರಿ ಎಂದು ಕುಂತೂರು ಶಾಖಾ ಉಪ ವಲಯ
ಅರಣ್ಯ ಅಧಿಕಾರಿ ಜಯಕುಮಾರ್ ತಿಳಿಸಿದ್ದಾರೆ.