24.5 C
Kadaba
Thursday, March 20, 2025

ಹೊಸ ಸುದ್ದಿಗಳು

ಸವಣೂರು ಗ್ರಾ.ಪಂ ವ್ಯಾಪ್ತಿ: ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ವ್ಯಕ್ತಿಯ ಜಾಗದಲ್ಲಿ ರಸ್ತೆ ನಿರ್ಮಾಣ:ತನಿಖೆಗೆ ಆಗಮಿಸಿದ ಲೋಕಾಯುಕ್ತ ಪೊಲೀಸರು

Must read

 

kadabatimes.in
ಲೋಕಾಯುಕ್ತ ಪೊಲೀಸರು ಮಾಹಿತಿ ಪಡೆಯುತ್ತಿರುವುದು

kadabatimes.in

ಕಡಬ/ಸವಣೂರು: ಪರಿಶಿಷ್ಟ ವರ್ಗಕ್ಕೆ ಸೇರಿದ್ದ ವ್ಯಕ್ತಿಯ ಜಾಗದಲ್ಲಿ
ಸಾರ್ವಜನಿಕ ಅನುಕೂಲಕ್ಕಾಗಿ ಕಾಲುದಾರಿ ನೀಡಿದನ್ನು ಅಕ್ರಮ ಮರಳು ಸಾಗಾಟಕ್ಕಾಗಿ ಪ್ರಭಾವಿ ವ್ಯಕ್ತಿಗಳ
ಕುಮ್ಮಕಿನಿಂದ ರಸ್ತೆ ಮಾಡಲು ಮುಂದಾದ ವಿಚಾರಕ್ಕೆ ಸಂಬಂಧಿಸಿ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಕ್ಕೆ
ಸಂಬಂಧಿಸಿ  ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಸವಣೂರು
ಗ್ರಾ.ಪಂ ವ್ಯಾಪ್ತಿಯ ಕೆಡಿಂಜಿಯ ಪರಿಶಿಷ್ಟ ಸಮುದಾಯದ 
ರಾಮಣ್ಣ  ಎಂಬರಿಗೆ ಸೇರಿದ ಕಾಲು ದಾರಿಯನ್ನು
ರಸ್ತೆ ಮಾಡಲು ಮುಂದಾದ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ  ವಿಶ್ವನಾಥ ಅಲೆಕ್ಕಾಡಿ ಲೋಕಾಯುಕ್ತದಲ್ಲಿ ಗಣಿ ಇಲಾಖೆಯ ಉಪ
ನಿರ್ದೇಶಕರು,ತಹಶೀಲ್ದಾರ್, ತಾ.ಪಂ ಇಂಜಿನಿಯರ್, ತಾ.ಪಂ ಇಒ,ಗ್ರಾ.ಪಂ ಪಿಡಿಒ ಅವರ ಮೇಲೆ ಪಿಟಿಸಿಎಲ್
ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ  ದೂರು ದಾಖಲಿಸಿದ್ದರು.


kadabatimes.in

ದೂರಿನಲ್ಲಿ
ವಾರ್ಡಿನ ಗ್ರಾ.ಪ ಸದಸ್ಯ ತೀರ್ಥರಾಮ  ಸಹಿತ ಇತರರು ಪಿಟಿಸಿಎಲ್ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ  ಇಂಜಿನಿಯರ್ ಅವರನ್ನು ಕರೆದುಕೊಂಡು ಬಂದು ಕಾನೂನು ಮೀರಿ ಸರ್ವೆ
ಮಾಡಿರುವುದಾಗಿ ಉಲ್ಲೇಖಿಸಲಾಗಿತ್ತು. ಗ್ರಾ.ಪಂ ಹಣವನ್ನು ದುರುಪಯೋಗ  ಪಡಿಸಿಕೊಂಡು ಅಕ್ರಮವಾಗಿ ಕಾಂಕ್ರೀಟ್ ಹಾಕಿ ಅದನ್ನು ರಸ್ತೆಯಾಗಿ
ಪರಿವರ್ತನೆ ಮಾಡಿದ್ದಾರೆ. ಪಕ್ಕದ ಜಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಗೆಂದು
ಖಾಲಿ ಪೇಪರ್ ಗೆ ಸಹಿ ಪಡೆದು ಭಾವಚಿತ್ರವನ್ನು ಪಡೆದುಕೊಂಡಿರುವುದಾಗಿ ತಿಳಿಸಲಾಗಿತ್ತು.  ಅದರಂತೆ  ಲೋಕಾಯುಕ್ತ
ಪೊಲೀಸರು ಇದರ ವಿಚಾರಣೆ ಆರಂಭಿಸಿದ್ದು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. 


ಸಿಸಿಟಿವಿ ಅಳವಡಿಸಿದ ಭೀಮ್
ಆರ್ಮಿ ಸಂಘಟನೆ:
   ರಸ್ತೆ ವಿಚಾರವಾಗಿ
ಇಲ್ಲಿನ ಕೆಲ ಸ್ಥಳೀಯರು ,ಪ್ರಭಾವಿಗಳು ರಾಮಣ್ಣ ಅವರ ಪತ್ನಿಗೆ  ಮನೆ ಬಳಿ ಬಂದು ಮಾತುಕತೆ ಮಾಡುತ್ತಿದ್ದರು. ಅಕ್ರಮವಾಗಿ ಮರಳು
ಸಾಗಾಟ ಗಾರರು ಮಾನಸಿಕ ಹಿಂಸೆ ನೀಡುತ್ತಿದ್ದರು. ತನಗೆ ನೆಮ್ಮದಿಯೂ ಇಲ್ಲ, ರಕ್ಷಣೆಯೂ ಇಲ್ಲ ಎಂದು
ಸಂಘಟನೆಯ ಮೊರೆ ಹೋಗಿದ್ದರು. ಈ ಸಮಸ್ಯೆಯನ್ನು ಅರಿತ  ಭೀಮ್ ಆರ್ಮಿ ಸಂಘಟನೆಯ ಕಡಬ ತಾಲೂಕು ಅಧ್ಯಕ್ಷ ರಾಘವ ಕಳಾರ
ಅವರ ಮುಂದಾಳತ್ವದಲ್ಲಿ ಮನೆ ಬಳಿ  ಸಿಸಿಟಿ ಅಳವಡಿಸಿದ್ದಾರೆ.
 ಕಳೆದ ಭಾನುವಾರ ಸಂಘಟನೆಯ ಪದಾಧಿಕಾರಿಗಳು ತೆರಳಿಸಿ
ಸಿಸಿಟಿವಿ ಅಳವಡಿಸಿ ಉದ್ಘಾಟಿಸಿ ಎಲ್ಲಾ ಚಲನವಲನದ ಬಗ್ಗೆ ನಿಗಾವಹಿಸುವುದಾಗಿ  ಮಹಿಳೆಗೆ ಅಭಯ ನೀಡಿದ್ದಾರೆ.

ಸಿಸಿ ಟಿವಿ ಅಳವಡಿಸಿದ ಭೀಮ್ ಆರ್ಮಿ ಸಂಘಟನೆ


ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ತಾರಾನಾಥ, ಸದಸ್ಯರಾದ ಲೋಕೇಶ್, ಸುಂದರ, ಶೀನ ಬಾಳಿಲ, ವಿಶ್ವಾಸ್, ಯೋಗಿಶ  ಮತ್ತು ಜಾಗದ ವಾರಿಸುದಾರರಾದ ಹೇಮಾ, ಧೀರಜ್ ಹಾಜರಿದ್ದರು.

kadabatimes.in

ಈ ಬೆನ್ನಲ್ಲೇ  ಮಹಿಳೆಯು ಸಿಸಿಟಿಯನ್ನು ಸಂರಕ್ಷಿಸುವಂತೆ ಬೆಳ್ಳಾರೆ ಪೊಲಿಸ್
ಠಾಣೆ ಮತ್ತು ಸ್ಥಳೀಯ ಗ್ರಾ.ಪಂ ಮನವಿ ನೀಡಿದ್ದಾರೆ.