38.3 C
Kadaba
Thursday, March 20, 2025

ಹೊಸ ಸುದ್ದಿಗಳು

ಕಡಬ: ಮನೆಯೊಂದರ ಬಳಿ ವ್ಯಕ್ತಿಯೊಬ್ಬನನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರ ಗುಂಪು:ಪೊಲೀಸ್ ಎಂಟ್ರಿ

Must read

 

kadabatimes.in
ವೈರಲ್ ಆಗಿರುವ ವೀಡಿಯೋದ ಚಿತ್ರಗಳು(KADABA TIMES)

kadabatimes.in

ಕಡಬ: ಇಲ್ಲಿನ
ಕಾಲೇಜು ರಸ್ತೆಯ ಮನೆಯೊಂದರ ಅಂಗಳದಲ್ಲಿ
 ಜನರ ಗುಂಪೊಂದು
ಸೇರಿ ಪರಸ್ಪರ ವಾಗ್ವಾದ ಬಳಿಕ  ವ್ಯಕ್ತಿಯೊಬ್ಬನನ್ನು ಮನೆಯೊಳಗೆ ಹೋಗುತ್ತಿದಂತೆ   ಡೋರ್ ಲಾಕ್
ಮಾಡಲು ಮುಂದಾದ ಘಟನೆ ಬುಧವಾರ
 ನಡೆದಿದ್ದು,  ಈ ಕುರಿತ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿದಾಡುತ್ತಿದೆ.


ಏರುಧ್ವನಿಯಲ್ಲಿ
ಪರಸ್ಪರ ವಾಗ್ವಾದ ನಡೆಯುತ್ತಿರುವುದನ್ನು ಗಮನಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಗಾಬರಿಕೊಂಡಿದ್ದು
ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.  ಈ ಘಟನೆಗೆ
ಸಂಬಂಧಿಸಿ  ವೈರಲ್ ಆಗಿರುವ ವೀಡಿಯೋದಲ್ಲಿ  ವ್ಯಕ್ತಿಯೊಬ್ಬರು ಮನೆಯೊಂದರ ಬಾಗಿಲಲ್ಲಿ ನಿಂತು ಅಂಗಳದಲ್ಲಿದ್ದ
ಗುಂಪಿನವರ ವೀಡಿಯೋ ಮಾಡುತ್ತಿರುವುದು ಕಂಡು ಬಂದಿದೆ.   ಅಲ್ಲದೆ ವೀಡಿಯೋ ಮಾಡಿದಾತನನ್ನು ಮಹಿಳೆಯರು  ತರಾಟೆಗೆ ತೆಗೆದುಕೊಳ್ಳುತ್ತಿರುವ  ದೃಶ್ಯವಿದ್ದು, ಆತ ಮನೆಯೊಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕುತ್ತಿರುವುದು ವೈರಲ್ ಆಗಿರುವ  ವೀಡಿಯೋದಲ್ಲಿದೆ.


kadabatimes.in

ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಗಲಾಟೆಯನ್ನು ನಿಭಾಯಿಸಿದ್ದಾರೆ.  
ಘಟನೆ ಬಗ್ಗೆ ಮಾಹಿತಿಗಾಗಿ  ಪೊಲೀಸರನ್ನು ಸಂಪರ್ಕಿಸಿದಾಗ ,  ಸ್ವಸಹಾಯ
ಸಂಘವೊಂದರ  ಹಣ ಕಟ್ಟದ ವಿಚಾರಕ್ಕೆ ಸಂಬಂಧಿಸಿ ಮನೆಯೊಂದಕ್ಕೆ  ಸಂಘಕ್ಕೆ   ಸಂಬಂಧಿಸಿದ ಪದಾಧಿಕಾರಿಗಳು ಎನ್ನಲಾದ ತಂಡ  ತಿಳುವಳಿಕೆ ನೀಡುವ ಸಲುವಾಗಿ ಹೋಗಿದ್ದಾಗ  ಓರ್ವ ವೀಡಿಯೋ
ಚಿತ್ರೀಕರಿಸಲು ಮುಂದಾದ ವೇಳೆ ಈ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿಸಿದ್ದಾರೆ. 


ನಂತರದ ಬೆಳವಣಿಗೆಯಲ್ಲಿ  ವೀಡಿಯೋ ಮಾಡಿದಾತನನಿಗೆ  ಪೊಲೀಸರು ರಕ್ಷಣೆ ನೀಡಿ ವಾಹನವೊಂದರಲ್ಲಿ ಠಾಣೆಗೆ  ಕರೆತಂದಿರುವುದಾಗಿ ತಿಳಿದು ಬಂದಿದೆ. ಮಹಿಳೆಯರ ಗುಂಪು ಕೂಡ ಠಾಣೆ್ಯತ್ತ ಬಂದಿರುವುದಾಗಿ ತಿಳಿದು ಬಂದಿದೆ.  ಮುಂದುವರಿದ
ಬೆಳವಣಿಗೆಯಲ್ಲಿ ಮನೆಯವರು ಅಂಗಳದಲ್ಲಿ ಗುಂಪು ಸೇರಿದವರ ವಿರುದ್ದ ದೂರು ನೀಡಲು ಮುಂದಾಗಿರುವುದಾಗಿ ತಿಳಿದು ಬಂದಿದೆ.



kadabatimes.in