



![]() ![]() |
ಕಾಪೆಜಾಲು ನಿವಾಸಿ ಡೊಂಬಯ್ಯ ನಲಿಕೆ |
ಕಡಬ/ಸವಣೂರು:
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಜಾಲಿ ಪ್ರಶಸ್ತಿಯನ್ನು ಪ್ರಕಟಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಜಾನಪದ ರಾಜ್ಯ
ಪ್ರಶಸ್ತಿಗೆ ಸವಣೂರು ಗ್ರಾಮದ
ಹಿರಿಯ ದೈವನರ್ತಕರೊಬ್ಬರು ಆಯ್ಕೆಯಾಗಿದ್ದಾರೆ.
ಕಡಬ
ತಾಲೂಕಿನ ಕುದ್ಮಾರು ಗ್ರಾಮದ ಕಾಪೆಜಾಲು ನಿವಾಸಿ ಡೊಂಬಯ್ಯ ನಲಿಕೆ ಪ್ರಶಸ್ತಿಗೆ ಭಾಜನರಾದವರು. ಅ.26
ಶನಿವಾರ ಬೆಂಗಳೂರಿನ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಸ್ವಾಯತ್ತ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ರಾಜ್ಯದ
20 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಂಘಟಕ, ಕಾರ್ಯಕ್ರಮ ಅಧಿಕಾರಿ ಆಗಿದ್ದ ದಿ.ಟಿ.ಕೆ.
ಗೌಡ ಅವರು ಸ್ಥಾಪಿಸಿದ ದತ್ತಿಯಿಂದ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ನಗದು ಪುರಸ್ಕಾರದ ಜತೆಗೆ ರಾಜ್ಯಮಟ್ಟದ ಗೌರವ ಒಳಗೊಂಡಿದೆ.
ಡೊಂಬಯ್ಯ
ನಲಿಕೆ ಅವರು
ದಿ.ಐತ್ತ ಅಜಿಲ ಮತ್ತು ದಿ.ದುಗ್ಗಮ್ಮ ದಂಪತಿಯ
ಏಳು ಮಕ್ಕಳಲ್ಲಿ ಕೊನೆಯ ಮಗನಾಗಿ ಜುಲೈ 13, 1976 ರಲ್ಲಿ ಜನಿಸಿದ್ದಾರೆ. ಕೊಪ್ಪ
ಸರಕಾರಿ ಶಾಲೆ ಮತ್ತು ಕುದ್ಮಾರು ಸರಕಾರಿ ಶಾಲೆಯಲ್ಲಿ 7ನೇ ತರಗತಿಯ ವರೆಗೆ
ವಿದ್ಯಾಭ್ಯಾಸ ಮಾಡಿದ್ದು, ಬಳಿಕ ತನ್ನ ತಂದೆಯ ಒತ್ತಾಸೆಯಂತೆ 16ನೇ ವಯಸ್ಸಿನಲ್ಲಿ ದೈವಾರಾಧನೆಲ್ಲಿ
ತೊಡಗಿಕೊಂಡಿದ್ದರು.
ಶಿರಾಡಿ,
ಕಲ್ಲುರ್ಟಿ, ಉಳ್ಳಾಕುಲು, ಚಾಮುಂಡಿ, ಪಂಜುರ್ಲಿ ದೈವಗಳೀಗೆ ನೇಮ ಕಟ್ಟುತ್ತಿದ್ದಾರೆ. ಅವರು ಈ ವರೆಗೆ ಸುಮಾರು
3 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ದೈವದ ನರ್ತನ ಸೇವೆ ಮಾಡಿದ್ದಾರೆ.

