32.4 C
Kadaba
Thursday, March 20, 2025

ಹೊಸ ಸುದ್ದಿಗಳು

ಯಕ್ಷಬೊಳ್ಳಿ ಕಡಬ ದಿನೇಶ್ ರೈ ಕಲಾಯಾನದ ರಜತ ಸಂಭ್ರಮದ ಹಿನ್ನೆಲೆ: ಚಂಡಿಕಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

Must read

 

kadabatimes.in
ಚಂಡಿಕಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ

kadabatimes.in

ಕಡಬ:  ಯಕ್ಷಬೊಳ್ಳಿ ಕಡಬ ದಿನೇಶ್ ರೈ ಕಲಾಯಾನದ ರಜತ ಸಂಭ್ರಮದ ಹಿನ್ನೆಲೆಯಲ್ಲಿ
ಜನವರಿ 22ರಂದು
  ಲೋಕಕಲ್ಯಾಣಕ್ಕಾಗಿ ಚಂಡಿಕಯಾಗ ನಡೆಯಲಿದ್ದು
ಇದರ ಭಾಗವಾಗಿ ಶುಕ್ರವಾರ ಶ್ರೀ ದುರ್ಗಾಂಬಿಕಾ ಅಮ್ಮನವರ ಸನ್ನಿಧಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.


ದೇವಸ್ಥಾನದ
ಪ್ರಧಾನ ಅರ್ಚಕರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ವೇಳೆ ದಿನೇಶ್ ರೈ ವರ ತಾಯಿ ವಾರಿಜ
ರೈ  ಪ್ರಮುಖರಾದ   ಉಪತಹಶೀಲ್ದಾರ್
ಗೋಪಾಲ್  ಸೀತಾ ರಾಮ ಗೌಡ ಪೊಸವಳಿಕೆ,  ಶಿವಪ್ರಸಾದ್ ರೈ ಮೈಲೇರಿ, , ಅರುಣ್ ಪಿಜಕ್ಕಳ, ಪ್ರಸಾದ್
ಕೆದಿಲಾಯ,ಕಿಶನ್ ರೈ ಕಡಬ, ಬಾಲಕೃಷ್ಣ ರೈ ಮರ್ದಾಳ, ಪ್ರಧಾನ ಅರ್ಚಕರು, ಕರುಣಾಕರ ಎ ಎಸ್ ಐ, ಹರೀಶ್
ಹೆಡ್, ರಕ್ಷಾ ಚಂದ್ರಹಾಸ್ ರೈ,ಪ್ರೇಮಾ ವಿದ್ಯಾನಗರ, ಧನು ಮರ್ದಾಳ, ಸುಂದರ್ ಹಾಜರಿದ್ದರು.


kadabatimes.in

ಲೋಕಕಲ್ಯಾಣಕ್ಕಾಗಿ
ಈ ಚಂಡಿಕಾ ಯಾಗ ನಡೆಯಲಿದ್ದು,  ದೇವಿ
ಉಪಾಸನೆಯ ಪ್ರಮುಖ ಭಾಗವೇ ದುರ್ಗಾಸಪ್ತಶತಿ ಪಾರಾಯಣ. ದುರ್ಗಾಸಪ್ತಶತಿಯಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರರೂಪಕವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ.   ಚಂಡಿಕಾ ದೇವಿಯು ಮಧುಕೈಟಭ, ಮಹಿಷಾಸುರ, ಶುಂಭ, ನಿಶುಂಭ, ಚಂಡಮುಂಡ, ರಕ್ತಬೀಜ ರಾಕ್ಷಸರನ್ನು ತ್ರಿಶಕ್ತಿಯ ರೂಪದಿಂದ ವಧಿಸುತ್ತಾಳೆ. ಲೋಕ ಪಾವನಿಯಾಗಿ, ಲೋಕ ಕಲ್ಯಾಣವನ್ನು ಮಾಡುತ್ತಾಳೆ ಎಂಬ ನಂಬಿಕೆ.


ನಕಾರಾತ್ಮಕ
ಅಂಶಗಳು ಮರೆಯಾಗಿ ಸಕಾರಾತ್ಮಕ ಚಿಂತನೆ, ಶಕ್ತಿ ಉಂಟಾಗುತ್ತದೆ. ಶಾಪ, ಪೀಡೆಗಳು ಪರಿಹಾರವಾಗುತ್ತವೆ. ಎಲ್ಲಾ ಬಗೆಯ ಸಂಕಷ್ಟಗಳು ಮರೆಯಾಗುತ್ತವೆ. ಉತ್ತಮ ಆರೋಗ್ಯ, ಸಂಪತ್ತು, ಅಭಿವೃದ್ಧಿ, ಕಠಿಣತಮವಾದ ಕಾಯಿಲೆಗಳಿಂದ ಪರಿಹಾರ, ಶತ್ರು ಬಾಧಾ ನಿವಾರಣೆ.


ಚಂಡಿ
ಹೋಮದ ಬಗೆ:
ಚಂಡಿಕಾ ಯಾಗದಲ್ಲಿ ಎರಡು ಬಗೆಯಿದೆ. ಶತ ಚಂಡಿಕಾ ಯಾಗ,
ಪ್ರಯೂತ ಚಂಡಿಯಾಗ, ಆಯುತ ಚಂಡಿಯಾಗ. ಆಯುತ ಚಂಡಿಯಾಗವೆಂದರೆ ದುರ್ಗಾಸಪ್ತಶತಿಯ 700 ಶ್ಲೋಕಗಳನ್ನು ಹತ್ತು ಸಾವಿರ ಬಾರಿ ಜಪಿಸುತ್ತಾರೆ. ಪ್ರಯೂತ ಚಂಡಿಯಾಗವೆಂದರೆ 700 ಶ್ಲೋಕಗಳನ್ನು ಒಂದು ದಶಲಕ್ಷ ಬಾರಿ ಜಪಿಸುತ್ತಾರೆ.

kadabatimes.in