23.9 C
Kadaba
Friday, March 21, 2025

ಹೊಸ ಸುದ್ದಿಗಳು

ನೆಲ್ಯಾಡಿ:ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಶಂಕಿತ ಡೆಂಗ್ಯೂ ಜ್ವರದಿಂದ ಮೃತ್ಯು

Must read

 

kadabatimes.in
ಮೃತ ಲೀಲಾವತಿ(KADABA TIMES )

kadabatimes.in

ನೆಲ್ಯಾಡಿ: ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸಿರಿಬಾಗಿಲು ಗ್ರಾಮದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಡೆಂಗ್ಯು ಜ್ವರ ಎಂದು ಶಂಕಿಸಲಾಗಿದೆ.


ಸಿರಿಬಾಗಿಲು ಗ್ರಾಮದ ಪುಲ್ಲೊಟ್ಟೆ ನಿವಾಸಿ ಲೀಲಾವತಿ(35 .)ಮೃತಪಟ್ಟವರು.


kadabatimes.in

ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದ ಇವರು  ನಾಲ್ಕೈದು ದಿನಗಳ ಹಿಂದೆ
ಜ್ವರ ಕಾಣಿಸಿಕೊಂಡಿದ್ದು ಆರಂಭದಲ್ಲಿ ಉದನೆಯ ಕ್ಲಿನಿಕ್ವೊಂದರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಜ್ವರ ಉಲ್ಬಣಿಸಿದ ಹಿನ್ನೆಲೆಯಲ್ಲಿ .25ರಂದು ರಾತ್ರಿ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಪುತ್ತೂರು ಸರಕಾರಿ ಆಸ್ಪತ್ರೆ, ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.


ಅಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಅವರು .27ರಂದು ಬೆಳಿಗ್ಗೆ ನಿಧನರಾದರು ಎಂದು ವರದಿಯಾಗಿದೆ. ಲೀಲಾವತಿಯವರು ಡೆಂಗ್ಯು ಜ್ವರದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಅವರ ಸಹೋದರ ದಿನೇಶ್  ತಿಳಿಸಿದ್ದಾರೆ.ಮೃತ ಲೀಲಾವತಿ ಅವರು ಪತಿ ಬಾಬು, ಪುತ್ರ ಶಯನ್, ಪುತ್ರಿ ಸಾನ್ವಿ, ಅವರನ್ನು ಅಗಲಿದ್ದಾರೆ.

kadabatimes.in