23.2 C
Kadaba
Saturday, March 22, 2025

ಹೊಸ ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯದ ಬಳಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷ :ಅಬ್ಬಾ… ಈ ಹಾವಿನ ಗಾತ್ರ ನೋಡಿದ್ರೆ ಮೈಜುಂ ಅನ್ನುತ್ತೆ!

Must read

 

kadabatimes.in
ಕೈಕಂಬದ ಮನೆಯೊಂದರ ಬಳಿ ಪತ್ತೆಯಾದ ಕಾಳಿಂಗ ಸರ್ಪ

kadabatimes.in

ಕಡಬ ಟೈಮ್ಸ್, ಕುಕ್ಕೆ
ಸುಬ್ರಹ್ಮಣ್ಯ:
ಕಾಳಿಂಗ  ಸರ್ಪವು
ಜಗತ್ತಿನ ಅತಿ ಉದ್ದವಾದ ವಿಷಕಾರಿ ಹಾವು,  ಇಂತಹ
ಬೃಹತ್ ಗಾತ್ರದ  ಬರೋಬ್ಬರಿ 12  ಅಡಿ
ಉದ್ದದ  ಕಾಳಿಂಗ
ಸರ್ಪವೊಂದು ಕುಕ್ಕೆ ಸುಬ್ರಹ್ಮಣ್ಯದ ಕೈಕಂಬದಲ್ಲಿ ಪತ್ತೆಯಾಗಿದೆ.


ಮನೆಯೊಂದರ
ಬಳಿ 
ಬೃಹತ್ ಗಾತ್ರದ ಕಾಳಿಂಗ ಸರ್ಪ  ಪ್ರತ್ಯಕ್ಷವಾಗಿ
ಕೆಲ ಹೊತ್ತು  ಆತಂಕದ
ಸೃಷ್ಠಿಸಿಸಿದೆ. ಆಹಾರವನ್ನು ಹರಿಸಿಕೊಂಡು ಕಾಳಿಂಗ ಸರ್ಪ
ಬಂದಿರಬಹುದೆಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

kadabatimes.in

  ಹಾವಿನ
ಗಾತ್ರ ನೋಡಿದಾಗಲೇ ಮೈಜುಂ ಎನ್ನುವಂತಿದೆ. ಸ್ಥಳೀಯರು ಇದರ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೆರೆದಿದ್ದವರು ಯಾರು ತೊಂದರೆ ಮಾಡದ ಕಾರಣ ಅಲ್ಲೇ ಸಮೀಪದ ಕಾಡಿನತ್ತ ತೆರಳಿರುವುದಾಗಿ ಮಾಹಿತಿ ಲಭಿಸಿದೆ. 

ಈ ಬಗ್ಗೆ ವನ್ಯ ಜೀವಿ  ಸಂರಕ್ಷಣಕಾರ ಭುವನ ಕೈ ಕಂಬ ಅವರು ಕಡಬ ಟೈಮ್ಸ್ ಜೊತೆ ಮಾತನಾಡಿ, ಈ ಕಾಳಿಂಗ ಸರ್ಪ ಬಹಳ ಕಪ್ಪಾಗಿದೆ, ಇದಕ್ಕೆ ಕಾರಣ ಇತ್ತೀಚೆಗೆ ಈ ಹಾವು ತನ್ನ ಪೊರೆಯನ್ನು ಇತ್ತೀಚೆಗೆ ಕಳಚಿದೆ ,ಹೀಗಾಗಿ ಈ ಸಂದರ್ಭದಲ್ಲಿ ಹಸಿವು ಹೆಚ್ಚಾಗಿರುತ್ತದೆ,ಹೀಗಾಗಿ ಆಹಾರ ಹರಸಿ ಬಂದಿರುವುದು ಎಂದಿದ್ದಾರೆ.  ಡಿಸೆಂಬರ್ ತಿಂಗಳಲ್ಲಿ ಮಿಲನದ ಸಮಯವಾಗಿದ್ದು ಕಾಳಿಂಗ ಸರ್ಪಗಳ ವಂಶ ವೃದ್ದಿಯ ಸಮಯವಾಗಿದೆ. 

kadabatimes.in

ಈ ಬಗ್ಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ಬಳಿ ಮಾಹಿತಿ ಕೇಳಿದ್ದು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.