ಕಡಬ ಟೈಮ್, ಪ್ರಮುಖ ಸುದ್ದಿ: ತನ್ನ ತೋಟಕ್ಕೆ ಪೈ ಅಳವಡಿಸಲು ಹೋದ ವೇಳೆ ಕೃಷಿಕರೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ಕಡಬದಿಂದ ಜ.22 ರಂದು ವರದಿಯಾಗಿದೆ.




ಕಡಬ ಗ್ರಾಮದ ಅಲಂಗೂರು-ತಿಮರಡ್ಡ ನಿವಾಸಿ ಮೋಹನ್ ರೈ(55ವ) ಹೃದಯಾಘಾತಕ್ಕೆ ಬಲಿಯಾದ ಕೃಷಿಕ.
![]() ![]() |
ತಿಮರಡ್ಡ ನಿವಾಸಿ ಕೃಷಿಕ ಮೋಹನ್ ರೈ(KADABA TIMES) |


ಮುಂಜಾನೆ ತನ್ನ ಮನೆ ಸಮೀಪದ ಕಾಡುತೋಟ ಎಂಬಲ್ಲಿನ ತನ್ನ ತೋಟಕ್ಕೆ ಕೆಲಸದ ಸಮುವಾಗಿ ಹೋಗಿದ್ದರು ಎನ್ನಲಾಗಿದೆ. ತೋಟಕ್ಕೆ ಹೋದವರು ಬಾರದೆ ಇರುವುದನ್ನು ಗಮನಿಸಿದ ಮನೆಯವರು ಹುಡುಕಾಡುತ್ತಾ ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅಸ್ಪಸ್ಥಗೊಂಡ ರೀತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಸ್ಥಳೀಯರ ನೆರವಿರಲ್ಲಿ ಕಡಬ ಸಮುದಾಯ ಆಸ್ಪತ್ರೆಗೆ ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಿಲ್ಲ ಎಂದು ತಿಳಿದು ಬಂದಿದೆ.

