ಮಂಗಳೂರು:
ಅನೈತಿಕ ಚಟುವಟಿಕೆ ಯ ಆರೋಪದ ಹಿನ್ನೆಲೆ ಮಸಾಜ್ ಸೆಂಟರೊಂದಕ್ಕೆ ದಾಳಿ ಮಾಡಿದ ರಾಮ್ ಸೇನಾ ಕರ್ನಾಟಕದ ಕಾರ್ಯಕರ್ತರು ದಾಂಧಲೆ ನಡೆಸಿರುವ ಘಟನೆ ಬಿಜೈ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.




ನಾಲ್ಕು
ಯುವತಿಯರು ಮತ್ತು ಓರ್ವ ಪುರುಷ ಬಿಜೈ ಕೆಎಸ್ ಆರ್ ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನಿನ ಮಸಾಜ್ ಪಾರ್ಲರ್ ನಲ್ಲಿದ್ದರು ಎನ್ನಲಾಗಿದೆ.


ಈ
ವೇಳೆ ಏಕಾಏಕಿ ನುಗ್ಗಿದ ಹತ್ತು ಮಂದಿ ರಾಮ ಸೇನೆಯ ಕಾರ್ಯಕರ್ತರ ತಂಡ ಓರ್ವನಿಗೆ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬರ್ಕೆ ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

