ಕಡಬ
ಟೈಮ್, ಪ್ರಮುಖ ಸುದ್ದಿ: ಓವರ್
ಟೇಕ್ ಭರದಲ್ಲಿ ಕಾರು ಚಾಲಕನೋರ್ವ ಸ್ಕೂಟಿಗೆ ಹಿಂಬದಿಯಿಂದ ಗುದ್ದಿ ಸವಾರ ಬಿದ್ದರೂ ಲೆಕ್ಕಿಸದೆ ಕಾರು
ನಿಲ್ಲಿಸದೆ ಪರಾರಿಯಾದ ಘಟನೆ ಎರ್ಮಾಲ ಎಂಬಲ್ಲಿ ನಡೆದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಸ್ಕೂಟಿ ಸವಾರ ಇಚಿಲಂಪಾಡಿಯ ಸಾಂತಪ್ಪ ಗೌಡ ಎಂಬವರ ತಲೆ, ಕೈ ಕಾಲು ಹಾಗೂ ಬೆನ್ನಿಗೆ ಗಾಯವಾಗಿದೆ.


ಜ.16ರಂದು ಕಡಬ-ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಎರ್ಮಾಲ ಎಂಬಲ್ಲಿ ಕಾರು ಚಾಲಕ ಸ್ಕೂಟಿಯನ್ನು
ಓವರ್
ಟೆಕ್ ಮಾಡಿದ ಕಾರಣ ಸ್ಕೂಟಿ ಸವಾರ ರಸ್ತೆಗೆ ಬಿದ್ದಿದ್ದರು. ಅದೇ ರಸ್ತೆಯಲ್ಲಿ ಬರುತ್ತಿದ್ದ ಆಟೋ ಚಾಲಕರೊಬ್ಬರು ಕೂಡಲೇ ತನ್ನ ವಾಹನದಲ್ಲಿ ಕಡಬ ಸಮುದಾಯ
ಆಸ್ಪತ್ರೆಗೆ ದಾಖಲಿಸಿದ್ದಾರೆ.


ವೈದ್ಯರ ಸಲಹೆಯಂತೆ ಹೆಚ್ಚುವರಿ ಚಿಕಿತ್ಸೆಗಾಗಿ
ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರ ಅಜಾಗರೂಕತೆ
ಮತ್ತು ನಿರ್ಲಕ್ಷತಣದಿಂದ ಕಾರು ಚಲಾಯಿಸಿ ವಾಹನಕ್ಕೆ
ಡಿಕ್ಕಿ ಹೊಡೆದು ಪರಾರಾರಿಯಾದ ಕಾರು ಚಾಲಕ ವಿಲ್ಸನ್
ಎಂಬಾತನ ವಿರುದ್ದ ಕಡಬ ಠಾಣೆಯಲ್ಲಿ THE BHARATIYA NYAYA SANHITA (BNS), 2023
(U/s-281,125(a)); INDIAN MOTOR VEHICLES
ACT, 1988 (U/s-134(a&b)) ಪ್ರಕರಣ ದಾಖಲಾಗಿದೆ.