ನೆಲ್ಯಾಡಿ/ಕಡಬ: ಅಪ್ರಾಪ್ತೆಯೊಂದಿಗೆ
ದೈಹಿಕ ಸಂಪರ್ಕ ನಡೆಸಿ ಆಕೆ ಗರ್ಭಿಣಿಯಾಗಲು ಕಾರಣಕರ್ತನಾದ ಯುವಕನ ವಿರುದ್ದ ಪೋಕ್ಸೋ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಬಾಲಕಿಯ ದೊಡ್ಡಪ್ಪನ ಮಗನ ಕೌಕ್ರಾಡಿ ಗ್ರಾಮ ಸಮೀಪದ ಯುವಕನೇ ಪ್ರಕರಣದ ಆರೋಪಿ.
10ನೇ ತರಗತಿಯಲ್ಲಿ ವಿದ್ಯಾಭ್ಯಾಸ
ಮಾಡುತ್ತಿದ್ದ ನೊಂದ ಅಪ್ರಾಪ್ತ ಬಾಲಕಿ (17.ವ) ಅರ್ಧಕ್ಕೆ ವಿದ್ಯಾಭ್ಯಾಸ
ಮೊಟಕುಗೊಳಿಸಿ ಮನೆಯಲ್ಲಿದ್ದು, ತಂದೆ, ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಯಾವುದೇ
ಮೂಲಭೂತ ಸೌಕರ್ಯವಿಲ್ಲದ ಮನೆಯಲ್ಲಿ ಒಬ್ಬಳೇ ಇರಲು ಭಯಗೊಂಡು ಕಳೆದ 6 ತಿಂಗಳಿನಿಂದ ಸಂತ್ರಸ್ಥೆ ದೊಡ್ಡಪ್ಪನ ಮನೆಯಲ್ಲೇ ಇರುತ್ತಿದ್ದಳು ಎನ್ನಲಾಗಿದೆ.


2024ರ ನವಂಬರ್ ತಿಂಗಳ
ಮೂರನೇ ವಾರದ ಒಂದು ದಿನ ರಾತ್ರಿ ಸಂತ್ರಸ್ಥೆ ಮಲಗಿದ್ದ ವೇಳೆ ಆಕೆಯ ದೊಡ್ಡಪ್ಪನ ಮಗ ಬಲತ್ಕಾರವಾಗಿ ದೈಹಿಕ
ಸಂಪರ್ಕ ಮಾಡಿದ್ದಲ್ಲದೆ, ಆ
ಬಳಿಕ ಬಾಧಿತೆಯ ಇಚ್ಚೆಗೆ ವಿರುದ್ಧವಾಗಿ 2-3ಬಾರಿ ಬೇರೆ ಬೇರೆ ದಿನಗಳಲ್ಲಿ ದೈಹಿಕ ಸಂಪರ್ಕ ನಡೆಸಿರುತ್ತಾನೆ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ
ತಿಳಿಸಿದರೆ ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಜ.22ರಂದು ಸ್ಥಳೀಯ ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಸಹಾಯಕಿರು ಬಾಲಕಿ ಮನೆಗೆ ಬಂದಾಗ ಆಕೆಯ ಚಲನವಲವನ್ನು ಗಮನಿಸಿ, ಆಕೆಯ
ತಿಂಗಳ ಋತುಚಕ್ರದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ
ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಜ.23ರಂದು ಸ್ಥಳೀಯ ಅಂಗನವಾಡಿ ಶಿಕ್ಷಕಿ ಮತ್ತು ಆಶಾ ಕಾರ್ಯಕರ್ತೆ ಬಾಲಕಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ವೈದ್ಯರಲ್ಲಿ ಪರೀಕ್ಷಿಸಿದಾಗ ಆಕೆ 2 ತಿಂಗಳ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ.
ಬಾಲಕಿ ಆಕೆಯ ದೊಡ್ಡಪ್ಪನ ಮನೆಯಲ್ಲಿ ಉಳಿದುಕೊಳ್ಳಲು ಹೋಗಿದ್ದ ಸಮಯ ದೊಡ್ಡಪ್ಪನ ಮಗ ಬಾಲಕಿಯನ್ನು
ಹೆದರಿಸಿ ಬಲಾತ್ಕಾರವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ನಡೆಸಿ ಗರ್ಭಿಣಿಯಾಗಲು ಕಾರಣಕರ್ತನಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಅನುಸಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

