32.4 C
Kadaba
Monday, March 17, 2025

ಹೊಸ ಸುದ್ದಿಗಳು

ಕಡಬ: ತನ್ನ ವಾಹನಕ್ಕೆ ಡಿಸೇಲ್ ತುಂಬಿಸಿ ಹಣ ಕೊಡದೆ ಎಸ್ಕೇಪ್ ಆದ ವ್ಯಕ್ತಿ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್, ಪ್ರಮುಖ ಸುದ್ದಿ:ಬೆಳ್ಳಂಬೆಳಗ್ಗೆ   ಕಡಬದ ಪೆಟ್ರೊಲ್ ಪಂಪೊದಕ್ಕೆ ತನ್ನ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ  ಡಿಸೇಲ್ ತುಂಬಿಸಿಕೊಂಡು ಹಣ ನೀಡದೆ ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಘಟನೆ ಜ. 22 ರ ಮುಂಜಾನೆ  ನಡೆದಿದೆ.

kadabatimes.in

ಸುಬ್ರಹ್ಮಣ್ಯ ರಸ್ತೆಯ ಹಳೆಸ್ಟೇಷನ್ ಬಳಿಯ ಹಿಂದೂಸ್ಥಾನ್ ಪೆಟ್ರೋಲ್  ಪಂಪ್ ನಲ್ಲಿ ಮುಂಜಾನೆ 6 ರ ಸುಮಾರಿಗೆ ಈ ಘಟನೆ ನಡೆದಿದ್ದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. KA01MX9632 ನಂಬರಿನ ಥಾರ್ ಜೀಪ್  ನಲ್ಲಿ ಬಂದ ವ್ಯಕ್ತಿ ತನ್ನ ವಾಹನಕ್ಕೆ ಫುಲ್ ಟ್ಯಾಂಕ್ ಡಿಸೇಲ್ ತುಂಬಿಸಿದ್ದಾನೆ.

kadabatimes.in

ನಂತರ ಒಂದು ಕ್ಯಾನ್ ನೀಡಿ ಅದರಲ್ಲಿ ತುಂಬಿಸಲು ಸೂಚಿಸಿದಾಗ ಪೆಟ್ರೋಲ್ ಬಂಕ್ ಸಿಬ್ಬಂದಿ ತೆರಳಿದ್ದು ಈ ಸಂದರ್ಭದಲ್ಲಿ ಏಕಾಏಕಿ ವಾಹನದಲ್ಲಿ ಪರಾರಿಯಾಗಿರುವುದು ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

kadabatimes.in

ಪ್ರಾಥಮಿಕ ಮಾಹಿತಿ ಪ್ರಕಾರ  ಈ ವಾಹನದಲ್ಲಿರುವ  ನಂಬರ್ ನಕಲಿಯಾಗಿರುವುದು ಗೊತ್ತಾಗಿದೆ.  ಪೆಟ್ರೋಲ್ ಬಂಕ್ ಸಿಬ್ಬಂದಿಗಳು ತಡವಾಗಿ ಪೊಲೀಸರ ಗಮನಕ್ಕೆ ತಂದಿದ್ದು ಪೊಲೀಸರು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

kadabatimes.in

 

You cannot copy content of this page