ಕಡಬ ಟೈಮ್ಸ್ (KADABA TIMES): ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯುಟ್ಯೂಬರ್ ದೂತ ಸಮೀರ್ ಎಂಡಿ ಹಂಚಿಕೊಂಡಿರುವ ಮೊದಲ ವಿಡಿಯೊ ಭಾರೀ ವೈರಲ್ ಆಗಿತ್ತು . ಹೀಗಾಗಿ ರಾಜ್ಯದಾದ್ಯಂತ ಸೌಜನ್ಯ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿತ್ತು.


ನಂತರ ಬೆಳವಣಿಗೆಯಲ್ಲಿ ಯೂಟ್ಯೂಬರ್ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್‌ಬಝಾರ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.ಬಳಿಕ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿತ್ತು.


ಪ್ರಥಮವಾಗಿ ಯುಟ್ಯೂಬ್ ನಲ್ಲಿ ಧರ್ಮಸ್ಥಳ ಹಾರರ್ ಎಂಬ ಶೀರ್ಷಿಕೆಲ್ಲಿ ಹಾಕಿದ್ದ ವಿಡಿಯೋ ದಾಖಲೆಯ ವೀಕ್ಷಣೆ ಸಿಕ್ಕಿತ್ತು. ಒರೋಬ್ಬರಿ 1 ಕೋಟಿ 90 ಲಕ್ಷ ವೀಕ್ಷಣೆ ಸಿಕ್ಕಿತು. ಇದೀಗ ಸಾಕ್ಷಿನಾಶ ಎಂಬ ಟೈಟಲ್ ನೊಂದಿಗೆ ಸೌಜನ್ಯ ಪರವಾಗಿ ಎರಡನೇ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಭಾರೀ ಸುದ್ದಿಮಾಡುತ್ತಿದೆ. ವೀಡಿಯೋ ಲಿಂಕ್ ಇಲ್ಲಿದೆ



