ಕಡಬ ಟೈಮ್ಸ್ (KADABA TIMES) : ಕಡಬ: ರಾಷ್ಟೀಯ ಹೆದ್ದಾರಿ 75ರ ಅಭಿವೃದ್ದಿ ಕಾಮಗಾರಿಯಿಂದ ಶಿರಾಡಿ ಗ್ರಾಮದ ವಾರ್ಡ್ ನಂ2 ಮತ್ತು 3 ರ ವ್ಯಾಪ್ತಿಯಲ್ಲಿ ಹಲವು ತೊಂದರೆಯಾಗಿದ್ದು, ಸರಿಪಡಿಸುವಂತೆ ಸಂಬಂದಪಟ್ಟವರಿಗೆ ಮನವಿ ಮಾಡಿಕೊಂಡರೂ ಪರಿಹಾರ ದೊರೆಯದ ಕಾರಣ ಮಾ.20 ರಂದು ಅಡ್ಡಹೊಳೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಶಿರಾಡಿ ಗ್ರಾ.ಪಂ ಸದಸ್ಯ ಎಮ್.ಕೆ ಪೌಲೊಸ್ ಹೇಳಿದ್ದಾರೆ.


ಕಡಬದಲ್ಲಿ ಪತ್ರೀಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಶಿರಾಡಿ ಗ್ರಾಮದ ಅಡ್ಡಹೊಳೆಯ ಪುಲ್ಲೊಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಇರು ತಿರುವು ರಸ್ತೆಯನ್ನು ಬಂದ್ ಮಾಡಿರುವುದರಿಂದ ಈ ಭಾಗದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ತೊಂದರೆಯಾಗಿದೆ. ದೇವಸ್ಥಾನದ ಬಳಿಯ ರಸ್ತೆಯನ್ನು ಎರಡು ಬದಿಯಲ್ಲಿ ಅಗಲಿಕರಣಗೊಳಿಸಿ ಕಾಂಕ್ರಿಟಿಕರಣ ಮಾಡಿಕೊಡುವುದಾಗಿ ಹೇಳಿ ವಂಚಿಸಲಾಗಿದೆ, ಅಲ್ಲದೆ ಅದೇ ಜಾಗದಲ್ಲಿ ಸ್ಲ್ಯಾಬ್ ಕಾಂಕ್ರಿಟಿಕರಣ ಮಾಡದೆ ಇತ್ತೀಚೆಗೆ ಮಹಿಳೆಯೋರ್ವರು ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ.




ಸಂತ ಜೋಸೆಫ್ ಚರ್ಚ್ ಬಳಿ ಪಂಚಾಯಿತಿ ರಸ್ತೆಗೆ ಕಾಂಕ್ರಿಟಿಕರಣಗೊಳಿಸುವ ಭರವಸೆ ಈಡೇರಿಲ್ಲ, ಶಿರಾಡಿ ಆಸ್ಪತ್ರೆ ಸಂಪರ್ಕ ರಸ್ತೆ ಕಾಂಕ್ರಿಟಿಕರಣ ಕಳಪೆಯಾಗಿದೆ, ಉದನೆ ಸಂತ ಅಂಥೋನಿ ಶಾಲೆಯರಸ್ತೆ ಅಗಲ ಮಾಡಿಕೊಟ್ಟಿಲ್ಲ ಎನ್ನುವ ಅರೋಪ ವ್ಯಕ್ತಪಡಿಸಿದರು. , ಶಿರಾಡಿಯಲ್ಲಿ ಎರಡು ತಿರುವು ರಸ್ತೆಯನ್ನು ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದರು. ಕಾಮಗಾರಿ ನಡೆಸುವಾಗ ಸ್ಥಳಿಯರ ಬೇಡಿಕೆ,ಆಗ್ರಹವನ್ನು ಅಧಿಕಾರಿಗಳು ಈಡೇರಿಸುವ ಭರವಸೆ ನೀಡಿದ್ದರು. ಅದರೆ ಈವರೆಗೆ ಯಾವೂದೆ ಸ್ಪಂದನೆ ದೊರೆತಿಲ್ಲ ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು,ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡುವ ತನಕ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.


ಪತ್ರೀಕಾಗೋಷ್ಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಜೋಸೆಫ್ ವಿ.ಎ,ಕಾರ್ಯದರ್ಶಿ ತೋಮಸ್ ವಿ ಜೆ, ಉಪಾಧ್ಯಕ್ಷ ಪ್ರಕಾಶ್ ಅಡ್ಡಹೊಳೆ, ಸಂತೋಷ್ ಅಡ್ಡಹೊಳೆ ಮೊದಲಾದವರು ಇದ್ದರು.