22.6 C
Kadaba
Saturday, March 22, 2025

ಹೊಸ ಸುದ್ದಿಗಳು

ಬೆಳ್ಳಾರೆ ಠಾಣಾ ವ್ಯಾಪ್ತಿ:ಮದುವೆ ನಿಗದಿಯಾದ ಯುವಕ ಕಾಣೆ : ದೂರು ದಾಖಲು

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್,(KADABA TIMES): ಮದುವೆ  ನಿಗದಿಯಾಗಿದ್ದ  ಯುವಕನೋರ್ವ ಕಾಣೆಯಾಗಿರುವ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು  ಈ ಬಗ್ಗೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadabatimes.in

ಸುಳ್ಯ ತಾಲೂಕು  ಬಾಳಿಲದ ದೇರಂಪಾಲು ಆರ್.ಸಿ.ಮನೆ ಶೀನಪ್ಪ ರೈಯವರ ಪುತ್ರ ಹರೀಶ್ ರೈ ಎಂಬವರು ಕಾಣೆಯಾಗಿದವರು.

kadabatimes.in

ಸುಮಾರು 13 ವರ್ಷಗಳಿಂದ ಪುತ್ತೂರಿನ ಖಾಸಗಿ ಫೈನಾನ್ಸ್ ನಲ್ಲಿ   ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ದೂರದ ಸಂಬಂಧಿಕರ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು. ಮಾ.20 ರಂದು ಬೆಳಿಗ್ಗೆ 7:30 ಗಂಟೆಗೆ ಯುವತಿಯ ಮನೆಗೆ ಹೋಗಿ ಬಳಿಕ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಬೈಕ್ ನಲ್ಲಿ   ತೆರಳಿ ವಾಪಸ್ ಸಂಜೆ 5:00 ಗಂಟೆಗೆ ಮನೆಗೆ ಬರಬೇಕಾದವರು ಸಂಜೆ 6:00 ಗಂಟೆಯಾದರೂ ಬಾರದೇ ಇದ್ದಾಗ ಯುವತಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ.

kadabatimes.in

ತಾನು ಮದುವೆಯಾಗಲಿರುವ ಯುವತಿಯ ಮನೆಗೆ ಬೆಳಿಗ್ಗೆ 8:00 ಗಂಟೆಗೆ ಹೋಗಿ ಆಕೆಯನ್ನು ತನ್ನ ಬೈಕ್ ನಲ್ಲಿ ಪುತ್ತೂರಿಗೆ ಕರೆದುಕೊಂಡು ಹೋಗಿ ಆಕೆಯನ್ನು ವಿಟ್ಲಕ್ಕೆ ಹೋಗುವ ಸಲುವಾಗಿ ಪುತ್ತೂರು ಬಸ್ ನಿಲ್ದಾಣದಲ್ಲಿ ಇಳಿಸಿ ತಾನು ಚಿನ್ನಾಭರಣ ಖರೀದಿ ಬಗ್ಗೆ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ಹೋಗಿರುವುದಾಗಿಯೂ, ಬಳಿಕ ಆಕೆಯು 12:00 ಗಂಟೆ ಬಳಿಕ ಹರೀಶ್ ನಿಗೆ ಕಾಲ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಆಕೆ ತಿಳಿಸಿದಳು.

kadabatimes.in

ಮಂಗಳೂರಿನಲ್ಲಿರುವ ಸಂಬಂಧಿಕರಿಗೆ  ಹಾಗೂ ಯುವಕನ  ಸಹೋದ್ಯೋಗಿಗಳಿಗೆ ಫೋನ್ ಮಾಡಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಆದರಿಂದ ಕಾಣೆಯಾಗಿರುವ ಹರೀಶ್ ರೈ ಯವರನ್ನು ಪತ್ತೆ ಹಚ್ಚಿ ಕೊಡಬೇಕು ಎಂದು ಅಣ್ಣ ವೆಂಕಪ್ಪ ರೈ ಯವರು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.