28.4 C
Kadaba
Wednesday, March 19, 2025

ಹೊಸ ಸುದ್ದಿಗಳು

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ: ಎರಡನೇ ವಿಡಿಯೋ ಪೋಸ್ಟ್ ಮಾಡಿದ ದೂತ ಸಮೀರ್

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್ಸ್ (KADABA TIMES):  ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯುಟ್ಯೂಬರ್ ದೂತ ಸಮೀರ್ ಎಂಡಿ ಹಂಚಿಕೊಂಡಿರುವ ಮೊದಲ ವಿಡಿಯೊ ಭಾರೀ  ವೈರಲ್ ಆಗಿತ್ತು . ಹೀಗಾಗಿ  ರಾಜ್ಯದಾದ್ಯಂತ ಸೌಜನ್ಯ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿತ್ತು.

kadabatimes.in

ನಂತರ ಬೆಳವಣಿಗೆಯಲ್ಲಿ ಯೂಟ್ಯೂಬರ್   ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್‌ಬಝಾರ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.ಬಳಿಕ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿತ್ತು.

kadabatimes.in

ಪ್ರಥಮವಾಗಿ ಯುಟ್ಯೂಬ್ ನಲ್ಲಿ‌ ಧರ್ಮಸ್ಥಳ ಹಾರರ್ ಎಂಬ ಶೀರ್ಷಿಕೆಲ್ಲಿ ಹಾಕಿದ್ದ ವಿಡಿಯೋ ದಾಖಲೆಯ ವೀಕ್ಷಣೆ ಸಿಕ್ಕಿತ್ತು. ಒರೋಬ್ಬರಿ 1 ಕೋಟಿ 90 ಲಕ್ಷ ವೀಕ್ಷಣೆ ಸಿಕ್ಕಿತು. ಇದೀಗ ಸಾಕ್ಷಿನಾಶ ಎಂಬ ಟೈಟಲ್ ನೊಂದಿಗೆ ಸೌಜನ್ಯ ಪರವಾಗಿ ಎರಡನೇ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಭಾರೀ ಸುದ್ದಿಮಾಡುತ್ತಿದೆ. ವೀಡಿಯೋ ಲಿಂಕ್ ಇಲ್ಲಿದೆ

kadabatimes.in

kadabatimes.in