ಕಡಬ ಟೈಮ್ಸ್ (KADABA TIMES) : ಇಲ್ಲಿನ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಐನೆಕಿದು ಗ್ರಾಮದಲ್ಲಿ ಮೀನು ಹಿಡಿಯಲೆಂದು ಹೊಳೆಗೆ ಇಳಿದ ವ್ಯಕ್ತಿ ನೀರಿನಲ್ಲಿ ಮೃತಪಟ್ಟ ಬಗ್ಗೆ ಮಾ.16 ರಂದು ವರದಿಯಾಗಿದೆ.


ಐನೆಕಿದು ಗ್ರಾಮದ ಗುಂಡಡ್ಕ ನಿವಾಸಿ ಜಗದೀಶ ಜಿ(45ವ) ಮೃತಪಟ್ಟವರು.




ತನ್ನ ಮಗನ ಜೊತೆ ಗುಂಡಡ್ಕ ಎಂಬಲ್ಲಿ ಹರಿಯುವ ಹರಿಹರ ಹೊಳೆಯಲ್ಲಿ ಮೀನು ಹಿಡಿಯುವ ಬಲೆಯೊಂದಿಗೆ ನೀರಿಗೆ ಇಳಿದಿದ್ದು ಅಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ.


ಮೃತರ ಮಗ ಕುಟುಂಬಸ್ಥರಿಗೆ ಮಾಹಿತಿ ನೀಡಿದ ಬಳಿಕ ನೀರಿನಲ್ಲಿ ಹುಡುಕಾಡಿದ ವೇಳೆ ಮೃತ ದೇಹವು ನೀರಿನ ಸುಳಿಯಲ್ಲಿ ಸಿಕ್ಕಿಕೊಂಡಿರುವುದು ತಿಳಿದು ಬಂದಿದೆ. ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ದೇವಿಪ್ರಸಾದ್ ಎಂಬವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 08/2025 ಕಲಂ: 194 BNSS ಯಂತೆ ಪ್ರಕರಣ ದಾಖಲಾಗಿರುತ್ತದೆ.