ಕಡಬ ಟೈಮ್ಸ್ (KADABA TIMES):ಮನೆಯಲ್ಲಿ ನಿಲ್ಲಿಸಿದ್ದ ಕಾರು ಹಿಂದಕ್ಕೆ ಚಲಿಸಿ ಗುದ್ದಿದ ಕಾರಣ ಅಂಗಳದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಅವರು ಕುಸಿದು ಬಿದ್ದು ಮೃತಪಟ್ಟ ಘಟನೆ ಶನಿವಾರ ಸುಳ್ಯದಲ್ಲಿ ನಡೆದಿದೆ.


ನಿವೃತ್ತ ರೇಂಜರ್ ಜೋಸೆಫ್ (74) ಎಂಬವರು ಮೃತಪಟ್ಟವರು. ಸುಳ್ಯ ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ಗುದ್ದಿದಾಗ ಕುಸಿದು ಬಿದ್ದರೆನ್ನಲಾಗಿದೆ.


ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ.


ಅರಣ್ಯ ಇಲಾಖೆಯಲ್ಲಿ ಪಂಜ, ಮಂಗಳೂರು ಹಾಗೂ ಸಂಪಾಜೆ ಕಡೆಗಳಲ್ಲಿ ಸೇವೆ ಸಲ್ಲಿಸಿ ಸಂಪಾಜೆಯಲ್ಲಿ ರೇಂಜರ್ ಆಗಿ ನಿವೃತ್ತರಾಗಿದ್ದರು. ಪುತ್ರ ಆಸ್ಟ್ರೇಲಿಯಾದಿಂದ ಬಂದ ಬಳಿಕವಷ್ಟೇ ಅಂತಿಮ ಕಾರ್ಯ ನಡೆಸುವುದರಿಂದ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಶೈತ್ಯಾಗಾರದಲ್ಲಿ ಇರಿಸಲಾಗಿರುವುದಾಗಿ ತಿಳಿದುಬಂದಿದೆ.ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

