

ಕಡಬ ಟೈಮ್,ಪುತ್ತೂರು: ಅತ್ಯಂತ ಕ್ರೀಯಾಶೀಲ ಅಧಿಕಾರಿಯಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದ
ಪುತ್ತೂರು ಉಪವಿಭಾಗದ
ಸಹಾಯಕ ಆಯುಕ್ತ ಜುಬಿನ್
ಮೊಹಾಪಾತ್ರ ಆವರಿಗೆ ದಿಢೀರ್ ವರ್ಗಾವಣೆಯಾಗಿದೆ.


ಮುಂದಿನ ಆದೇಶದ ವರೆಗೆ ರಾಯಚೂರು ನಗರ ಪಾಲಿಕೆಯ
ಆಯುಕ್ತರಾಗಿ ನಿಯೋಜಿಸಲಾಗಿದೆ.


ಇವರು ಪುತ್ತೂರು ಉಪವಿಭಾಗದ ಸುಳ್ಯ ಬೆಳ್ತಂಗಡಿ ಕಡಬ ವ್ಯಾಪ್ತಿಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ಸಮಯದಲ್ಲಿ ಜನಸ್ನೇಹಿಯಾಗಿ
ಗುರುತಿಸಿಕೊಂಡಿದ್ದರು.ಕುಕ್ಕೆ ಸುಬ್ರಹ್ಮಣ ದೇವಸ್ಥಾನದ ಆಡಳಿತಾಧಿಕಾರಿಯಾಗಿ
ಜವಾಬ್ದಾರಿ ವಹಿಸಿಕೊಂಡು ಹಲವು ಬದಲಾವಣೆಗಳನ್ನು ಮಾಡಿದ್ದರು.
ಐಎಎಸ್ ಹಾಗೂ ಐಪಿಎಸ್ ಎರಡೂ ವಿಭಾಗದಲ್ಲಿ ಕೆಲಸ ಮಾಡಿದ್ದ ಅವರು ಓರ್ವ ಸಾಮಾಜಿಕ ನ್ಯಾಯ ಪರ ಅಧಿಕಾರಿಯಾಗಿದ್ದರು.ವರ್ಗಾವಣೆಯಾದ ಇತರ ಅಧಿಕಾರಿಗಳ ವಿವರ ಇಲ್ಲಿದೆ.

