24.5 C
Kadaba
Monday, March 17, 2025

ಹೊಸ ಸುದ್ದಿಗಳು

ಕಡಬದ ಬಂಕ್‌ನಲ್ಲಿ ಡೀಸೆಲ್ ಹಣ ಕೊಡದೆ ವಾಹನ ಚಾಲಕ ಸಿನಿಮೀಯ ಶೈಲಿಯಲ್ಲಿ ಪರಾರಿ

Must read

ಕಡಬ ಟೈಮ್, ಪ್ರಮುಖ ಸುದ್ದಿ :ಬೆಳ್ಳಂಬೆಳಗ್ಗೆ   ಕಡಬದ ಪೆಟ್ರೊಲ್
ಪಂಪೊದಕ್ಕೆ ತನ್ನ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ  ಡಿಸೇಲ್ ತುಂಬಿಸಿಕೊಂಡು ಹಣ ನೀಡದೆ ಸಿನಿಮೀಯ ಶೈಲಿಯಲ್ಲಿ
ಪರಾರಿಯಾದ ಘಟನೆ ಜ. 22 ರ ಮುಂಜಾನೆ  ನಡೆದಿದೆ.

kadabatimes.in

ಪೆಟ್ರೋಲ್ ಪಂಪ್ ನಲ್ಲಿ ನಿಂತಿರುವ ವಾಹನ(KADABA TIMES)


kadabatimes.in

ಸುಬ್ರಹ್ಮಣ್ಯ
ರಸ್ತೆಯ ಹಳೆಸ್ಟೇಷನ್ ಬಳಿಯ ಹಿಂದೂಸ್ಥಾನ್ ಪೆಟ್ರೋಲ್
 ಪಂಪ್ ನಲ್ಲಿ ಮುಂಜಾನೆ 6 ರ ಸುಮಾರಿಗೆ ಈ ಘಟನೆ ನಡೆದಿದ್ದು
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. KA01MX9632 ನಂಬರಿನ ಥಾರ್ ಜೀಪ್  ನಲ್ಲಿ ಬಂದ ವ್ಯಕ್ತಿ ತನ್ನ ವಾಹನಕ್ಕೆ ಫುಲ್ ಟ್ಯಾಂಕ್ ಡಿಸೇಲ್
ತುಂಬಿಸಿದ್ದಾನೆ.


kadabatimes.in

ನಂತರ
ಒಂದು ಕ್ಯಾನ್ ನೀಡಿ ಅದರಲ್ಲಿ ತುಂಬಿಸಲು ಸೂಚಿಸಿದಾಗ ಪೆಟ್ರೋಲ್ ಬಂಕ್ ಸಿಬ್ಬಂದಿ ತೆರಳಿದ್ದು ಈ ಸಂದರ್ಭದಲ್ಲಿ
ಏಕಾಏಕಿ ವಾಹನದಲ್ಲಿ ಪರಾರಿಯಾಗಿರುವುದು ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಕಡಬ ಪೇಟೆ ರಸ್ತೆಯತ್ತ ತೆರಳಿದ್ದು ಬಳಿಕ ಯಾವ ಕಡೆ ತೆರಳಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ.


ಪ್ರಾಥಮಿಕ
ಮಾಹಿತಿ ಪ್ರಕಾರ  ಈ ವಾಹನದಲ್ಲಿರುವ  ನಂಬರ್ ನಕಲಿಯಾಗಿರುವುದು ಗೊತ್ತಾಗಿದೆ.  ಪೆಟ್ರೋಲ್ ಬಂಕ್ ಸಿಬ್ಬಂದಿಗಳು ತಡವಾಗಿ ಪೊಲೀಸರ ಗಮನಕ್ಕೆ
ತಂದಿದ್ದು ಪೊಲೀಸರು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.   

kadabatimes.in