



ಕಡಬ
ಟೈಮ್ಸ್: ಐಐಟಿ ಸೇರಿದಂತೆ
ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇರುವ ಜೆಇಇ ಮೈನ್ಸ್ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಪ್ರಕಟಿಸಿದೆ.


ಭಾನುವಾರದಿಂದ
ನ.22ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. 2025ರ ಜ.22ರಿಂದ
ಜ.31ರ ವರೆಗೆ ಪರೀಕ್ಷೆ
ನಡೆಯಲಿದೆ ಎಂದು ಎನ್ಟಿಎ ತಿಳಿಸಿದೆ.


ಪರೀಕ್ಷೆಗೆ
3 ದಿನ ಮೊದಲು ಎನ್ಟಿಎ ವೆಬ್ಸೈಟ್ನಲ್ಲಿ ಅಭ್ಯರ್ಥಿಗಳ ಅಡ್ಮಿಟ್ ಕಾಡ್ ಅಪ್ಲೋಡ್ ಮಾಡಲಾಗುತ್ತದೆ. ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಅರ್ಜಿ ಸಲ್ಲಿಕೆ, ಪರೀಕ್ಷೆ ಮಾದರಿಯನ್ನು jeemain.nta.nic.in ಪಡೆಯಬಹುದು.