![]() ![]() |
ಸಾಮರಸ್ಯ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮ( KADABA TIMES) |


ಕಡಬ: ಸಾಮರಸ್ಯ ವೇದಿಕೆ ಕಡಬ ವತಿಯಿಂದ ದೀಪಾವಳಿ ಹಬ್ಬದ
ಅಂಗವಾಗಿ ಮಜ್ಜಗುಡ್ಡೆಯಲ್ಲಿ ತುಡರ್ ಸಾಮರಸ್ಯದ ಜ್ಯೋತಿ ಕಾರ್ಯಕ್ರಮ ನಡೆಯಿತು.


ಶ್ರೀ ದುರ್ಗಾಂಬಿಕ ಅಮ್ಮನವರ
ದೇವಸ್ಥಾನದಿಂದ ದೀಪದೊಂದಿಗೆ ಮಜ್ಜಗುಡ್ಡೆಯವರೆಗೆ
ಸಾಗಿ ಬಳಿಕ ದೀಪ ಪ್ರಜ್ವಲಿಸಲಾಯಿತು.


ಅರೆಸೆಸ್ಸ್ ಪ್ರಾಂತ ಸಹ ಸೇವಾ ಪ್ರಮುಖ ನ.ಸೀತಾರಾಮ ರವರು ತುಡರ್ ಬಗ್ಗೆ ಮಾತನಾಡಿದರು.
ಚೊಂಕ್ರ ಮತ್ತು ಸುಂದರ ದಂಪತಿಗಳ ಮನೆಯಲ್ಲಿ ಈ ಕಾರ್ಯಕ್ರಮ
ಆಯೋಜಿಸಲಾಗಿತ್ತು.
ಈ ಸಮಯದಲ್ಲಿ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಣಾಧಿಕಾರಿ
ವೆಂಕಟ್ರಮಣ ಮಂಕುಡೆ
ಸೇರಿದಂತೆ ಪ್ರಮೋದ್ ಕುಮಾರ್ ರೈ, ರವೀಶ್ ಪಡುಮಲೆ, ನವೀನ್ ನೆರಿಯ,ಸುಜಿತ್ ಕುಂಡಡ್ಕ,ಅಜಿತ್ ರೈ
,ಶ್ರೀಕುಮಾರ್,ಶಿವಪ್ರಸಾದ್ , ಸುಧಾಕರ ರೈ ಹಾಗೂ ಮಜ್ಜಗುಡ್ಡೆಯ ನಿವಾಸಿಗಳು
ಹಾಜರಿದ್ದರು.

