23.9 C
Kadaba
Friday, March 21, 2025

ಹೊಸ ಸುದ್ದಿಗಳು

ಕಡಬದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಾಹಿತಿ ನೀಡುತ್ತಿದ್ದ ಮಧ್ಯೆ ಅಹವಾಲು ಮಂಡಿಸಿದ ಸಾರ್ವಜನಿಕರು

Must read

 

kadabatimes.in
ಲೋಕಾಯುಕ್ತ ಪೊಲೀಸರ ಬಳಿ ಅಹವಾಲು ಮಂಡಿಸಿದ ಸಾರ್ವಜನಿಕರು

kadabatimes.in

ಕಡಬ:
ಕಡಬ ಅಂಬೇಡ್ಕರ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ದ.ಕ ಜಿಲ್ಲಾ ಪೋಲೀಸ್ ವತಿಯಿಂದ ಸೋಮವಾರ ಬ್ರಷ್ಟಾಚಾರ
ವಿರುದ್ಧದ ಜಾಗೃತಿ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್
 ಮಾಹಿತಿ  ನೀಡುತ್ತಿದ್ದ
ಮಧ್ಯೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮಂಡಿಸಿದ್ದಾರೆ.

 

ಕಡಬ
ಪೋಲಿಸ್ ಠಾಣೆಯಲ್ಲಿ ಪಾಸ್ ಪೋರ್ಟ್ ವೆರಿಫಿಕೇಶನ್ಗೆ ಸತಾಯಿಸಿದ್ದಲ್ಲದೆ ಹಣ ನೀಡುವಂತೆ
ಪೋಲೀಸೊಬ್ಬರು ಪೀಡಿಸಿದ್ದಾರೆ,  ಹಣವನ್ನು
ಗೂಗುಲ್ ಅಥವಾ ಫೋನ್ ಪೇ  ಮಾಡುತ್ತೇವೆ
ಎಂದು ಹೇಳಿದಾಗ ಕ್ಯಾಶ್ ಕೊಡಿ ಎಂದಿದ್ದಾರೆ.  ಇನ್ನೊಂದು  ಪ್ರಕರಣದಲ್ಲಿ
ಗದರಿಸಿ ಕುಳಿತುಕೊಳ್ಳುವಂತೆ ಅವಮಾನಿಸಿದ್ದಾರೆ.  ಠಾಣೆಯ
ಮೇಲಾಧಿಕಾರಿಗಳು ಗೌರವ ನೀಡುತ್ತಾರೆ ಆದರೆ ಕೆಲವು ಪೋಲೀಸರು ಗೌರವ ನೀಡದೆ ಅವಮಾನಿಸುತ್ತಿದ್ದಾರೆ ಎಂದು ಕೋರಂದುರು ನಿವಾಸಿ ಬಶೀರ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ  ಲೋಕಾಯುಕ್ತ
ಅಧಿಕಾರಿಗಳು ಲಿಖಿತ ದೂರು ನೀಡುವಂತೆ  ಸಭೆಯಲ್ಲಿ
ತಿಳಿಸಿದರು
.

kadabatimes.in


ಇನ್ನು
ಪೆರಾಬೆ
ಗ್ರಾ.ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಜಾಗ ನಿಗದಿಪಡಿಸಿದರೂ ಈವರೆಗೆ  ಗಡಿಗುರುತು
ಮಾಡಿಲ್ಲ,   ಕುಟ್ರುಪ್ಪಾಡಿ
ಗ್ರಾ,.ಪಂಚಾಯಿತಿ ವ್ಯಾಪ್ತಿಯ  ಮುಳಿಯದಲ್ಲಿ  ಗದ್ದೆಗೆ  ಮಣ್ಣ
ಹಾಕಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದೆ, ಪಕ್ಕದ ಕೃಷಿ ನಾಶವಾಗುತ್ತಿದೆ,  ಕೋಣಾಜೆ
ಗ್ರಾಮ ಪಂಚಾಯಿತಿಯಲ್ಲಿ  ಒಂದೇ
ಕಾಮಗಾರಿಗೆ  ಬೇರೆ
ಬೇರೆ  ಬಿಲ್
ಮಾಡಿ ಬ್ರಷ್ಟಚಾರ ಎಸಗಲಾಗಿದೆ.    ಕಡಬ ಸರಕಾರಿ ಆಸ್ಪತ್ರೆಯಲ್ಲಿ  ವೈದ್ಯರೇ
ಇಲ್ಲ.  ಸರಕಾರಿ
ಶಾಲಾ ಶಿಕ್ಷಕರು  ಶಾಲೆಯಲ್ಲಿ  ಪಾಠ
ಮಾಡದೆ ಬೇರೆ  ಬೇರೆ
ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸರಕಾರಕ್ಕೆ ವಂಚಿಸುತ್ತಿದ್ದಾರೆ ಎಂದು ನಾಗರೀಕರು ಆರೋಪಿಸಿದರು. 


ಲೋಕಾಯುಕ್ತದಲ್ಲಿ
ದೂರು ದಾಖಲಾದ ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ, ಬದಲಾಗಿ ಅಂತವರಿಗೆ ಉದ್ಯೋಗದಲ್ಲಿ ಭಡ್ತಿ ಸಿಗುತ್ತದ ಎಂದು  ಆರೋಪಿಸಲಾಯಿತು.
ಪ್ರಮುಖರಾದ ಶಶಿಧರ ಬೊಟ್ಟಡ್ಕ, ಪುಷ್ಪಾವತಿ , ಲೋಕಯ್ಯ ಗೌಡ ಕೊಣಾಜೆ, ಫಯಾಝ್ ಕುಂತೂರು, ವಿನಿಶ್ ಬಿಳಿನೆಲೆ , ಕುಶಾಲಪ್ಪ ಗೌಡ ಕಲಪ್ಪಾರು ಮತ್ತಿತರರು ಅಹವಾಲು ಸಲ್ಲಿಸಿದ್ದಾರೆ.

kadabatimes.in