

![]() ![]() |
ಕೊಣಾಜೆ ನಿವಾಸಿ ಶಿಲ್ಪಾ ಎಂ.ಆರ್. |


ಕಡಬ ಟೈಮ್ಸ್ : 2023-24ನೇ ಸಾಲಿನ
ಸ್ನಾತಕೋತ್ತರ ಪದವಿ ಎಂ.ಕಾಂ.ನಲ್ಲಿ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಕಡಬ
ತಾಲೂಕಿನ ಕೊಣಾಜೆ ನಿವಾಸಿ ಶಿಲ್ಪಾ ಎಂ.ಆರ್. ಪ್ರಥಮ ರ‍್ಯಾಂಕ್ ಪಡೆದ
ವಿದ್ಯಾರ್ಥಿನಿ.


ಪ್ರಾಥಮಿಕ
ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡ್ಯ ಕೊಣಾಜೆ ಮತ್ತು ಕಡಬ ಸರಸ್ವತಿ ವಿದ್ಯಾಲಯ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕಡಬ ಸರಸ್ವತಿ ವಿದ್ಯಾಲಯ ಹಾಗೂ ಪದವಿ ಶಿಕ್ಷಣವನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮಾಡಿದ್ದಾರೆ.
ಕಡಬ
ತಾಲೂಕು ಕೊಣಾಜೆ ಗ್ರಾಮದ ಮನೆಜಾಲು ನಿವಾಸಿ, ಕಡಬ ಸಿ.ಎ.ಬ್ಯಾಂಕ್
ನಿರ್ದೇಶಕ ರಘುಚಂದ್ರ ಗೌಡ ಮತ್ತು ಭವಾನಿ ದಂಪತಿಯ ಪುತ್ರಿ.

