35.1 C
Kadaba
Thursday, March 20, 2025

ಹೊಸ ಸುದ್ದಿಗಳು

ಕಲ್ಪನೆಗಳಿಗೆ ಬಣ್ಣ ತುಂಬಿದ ಚಿಣ್ಣರು: ಸ್ಪರ್ಧೆಯಲ್ಲಿ ಉದಯವಾಯ್ತು ಚಿಣ್ಣರ ಲೋಕ!

Must read

kadabatimes.in
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು(KADABA TIMES) 


kadabatimes.in

ಕಡಬ:   ಪ್ರತಿಯೊಂದು ಮಗುವು ಶ್ರೇಷ್ಠ ಕಲಾವಿದ. ಯಾವತ್ತು ಕಲೆ
ಎಂಬುದು ರಕ್ತ ಗತವಾಗಿ ಬರುವುದಿಲ್ಲ. ಅದು ಅಭ್ಯಾಸದಿಂದ ಬರುತ್ತದೆ. ಮಕ್ಕಳಲ್ಲಿ ಅಭೂತಪೂರ್ವವಾದ ಪ್ರತಿಭೆ
ಇದ್ದು, ಅದನ್ನು ಗುರುತಿಸಿ ಬೆಳೆಸುವಲ್ಲಿ ಶಿಕ್ಷ ಕರು ಮತ್ತು ಪೋಷಕರ ಪಾತ್ರ  ಅಗಾಧವಾದದ್ದು 
ಅದನ್ನು ಹೊರತರಲು ಸೂಕ್ತ ಅವಕಾಶಗಳ ಅಗತ್ಯವಿದೆ. ಉದಯವಾಣಿ ಪತ್ರಿಕೆಯು ಮಕ್ಕಳ ಸೃಜನಶೀಲತೆಗೆ
ವೇದಿಕೆ ಕಲ್ಪಿಸಿದೆ.  ಇಲ್ಲಿನ  ಸೈಂಟ್ ಜೋಕಿಮ್ ಚರ್ಚ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ
ಉದಯವಾಣಿ ಚಿಣ್ಣರ ಬಣ್ಣ -2024 ಕಡಬ ತಾಲೂಕು ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಚಿಣ್ಣರು ಸಂಭ್ರಮದಿಂದ
ಪಾಲ್ಗೊಂಡರು.


1ರಿಂದ
7ನೇ ತರಗತಿಯ ಮಕ್ಕಳಿಗೆ ಸ್ಪರ್ಧೆಗೆ ಐಚ್ಚಿಕ ವಿಷಯ ನೀಡಲಾಗಿತ್ತು. 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ
ಅತಿಥಿಗಳು ಚೀಟಿ ಎತ್ತುವ ಮೂಲಕ ತರಕಾರಿ ಮಾರುಕಟ್ಟೆ ಚಿತ್ರಕಲಾ ಸ್ಪರ್ಧೆ ಹಾಗೂ ಸಿನೆಮಾ ಚಿತ್ರೀಕರಣ
ವಿಷಯವನ್ನು ನೀಡಲಾಯಿತು. ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ,
ಯೋಗ ಶಿಕ್ಷಕಿ ಕುಸುಮಾ ಹಾಗೂ ಶಿಕ್ಷಕಿ ಸ್ವಾತಿ ಬಿ. ಅವರ ನೇತೃತ್ವದಲ್ಲಿ ಸೌಟ್ ಗೈಡ್ಸ್ ವಿದ್ಯಾರ್ಥಿಗಳು
ಸ್ವಯಂಸೇವಕರಾಗಿ ಸಹಕರಿಸಿದರು.

ಸ್ಪರ್ಧೆಯಲ್ಲಿ ಚಿತ್ರ ಬಿಡಿಸುತ್ತಿರುವ ಪುಟಾಣಿಗಳು 


kadabatimes.in

ಸೈಂಟ್
ಜೋಕಿಮ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ। ಪ್ರಕಾಶ್ ಪೌಲ್ ಡಿಸೋಜಾ ಅವರು
 ಚಿತ್ರಕಲಾ ಸ್ಪರ್ಧೆಯನ್ನು
ಉದ್ಘಾಟಿಸಿದರು. ಮುಖ್ಯಅತಿಥಿಯಾಗಿ
ಹೊಸಮಠ ಪ್ರಾ.ಕೃ...
ಸಂಘದ ಮಾಜಿ ಅಧ್ಯಕ್ಷ ಎನ್. ಕರುಣಾಕರ ಗೋಗಟೆ,  ಪಂಜ
ಲಯನ್ಸ್ಕ್ಲಬ್ಅಧ್ಯಕ್ಷ ಶಶಿಧರ  ಅರುಣ್
ಪಳಂಗಾಯ, ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ. (ಮ್ಯಾಗಝಿನ್ ಇನಿಶಿಯೇಟಿವ್) ಉಪಾಧ್ಯಕ್ಷ ರಾಮಚಂದ್ರ ಮಿಜಾರ್ ಪಾಲ್ಗೊಂಡಿದ್ದರು.

ಚೀಟಿ ಎತ್ತುವ ಮೂಲಕ ವಿಷಯ ನೀಡಿದ  ಅತಿಥಿಗಳು 


ಉದಯವಾಣಿ
ವರದಿಗಾರ
ನಾಗರಾಜ್
ಎನ್.ಕೆ. ನಿರೂಪಿಸಿ,  ಮಂಗಳೂರು
ವರದಿಗಾರ ಸಂತೋಷ್ ಮೊಂತೆರೋ  ವಂದಿಸಿದರು.
ಉದಯವಾಣಿ ಮಣಿಪಾಲ ವಿಭಾಗದ ಪ್ರಸರಣಾಧಿಕಾರಿ ಅಜಿತ್ ಭಂಡಾರಿ, ಉದಯವಾಣಿ ಮಾರುಕಟ್ಟೆ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಜಯಂತ್ ಬಾಯಾರ್, ಪ್ರಸರಣ ವಿಭಾಗದ ಅರುಣ್  ಕುಮಾರ್, ಅನುದೀಪ್,
ಉದಯವಾಣಿ ಛಾಯಾಚಿತ್ರಗ್ರಾಹಕ ಸತೀಶ್ ಇರಾ, ಪುಂಜಾಲಕಟ್ಟೆ ವರದಿಗಾರ ರತ್ನದೇವ್, ಉಡುಪಿ ಆರ್ಟಿಸ್ಟ್ ಫೋರಂನ ಪದಾಧಿಕಾರಿ ಪ್ರಕಾಶ್ ಮತ್ತಿತರರಿದ್ದರು.

kadabatimes.in