![]() ![]() |
ಕಡಬ ಪೊಲೀಸರು ವಶಕ್ಕೆ ಪಡೆದಿರುವ ಮರಳು ತುಂಬಿದ ವಾಹನ |


ಕಡಬ: ಮರಳು ಗಾಡಿಯೊಂದನ್ನು ಕಡಬದ ಮುಖ್ಯ ಪೇಟೆಯಲ್ಲಿ
ಬೆನ್ನಟ್ಟಿದ್ದು ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ದಿಢೀರ್ ಪೆಟ್ರೊಲ್ ಪಂಪೊದಕ್ಕೆ ನುಗ್ಗಿಸಿದ
ಘಟನೆ ಸೋಮವಾರ ಮುಂಜಾನೆ ಕಡಬದಿಂದ ವರದಿಯಾಗಿದೆ.


ಗಸ್ತಿನಲ್ಲಿದ್ದ
ಪೊಲೀಸರು ಈ ಘನ ಗಾತ್ರದ ವಾಹನವನ್ನು ಗಮನಿಸಿ ನಿಲ್ಲಿಸಲು ಸೂಚಿಸಿದ್ದರು, ಇದನ್ನು ಲೆಕ್ಕಿಸದೆ ವಾಹನ
ವೇಗಗೊಳಿಸಿದ್ದು ಸಂಶಯಗೊಂಡ ಪೊಲೀಸರು ಬೆನ್ನಟ್ಟಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು
ಯತ್ನಿಸಿರುವುದಾಗಿ ತಿಳಿದು ಬಂದಿದೆ.
ಪೊಲೀಸರ
ಪರಿಶೀಲನೆ ವೇಳೆ ಮರಳು ಸಾಗಾಟಕ್ಕೆ ಪರವಾನಿಗೆಯಾಗಲಿ, ವಾಹನಕ್ಕೆ ಜಿಪಿಎಸ್ ಆಗಲಿ ಇಲ್ಲದಿರುವುದು ಕಂಡು
ಬಂದಿದ್ದು ಚಾಲಕ ತಬ್ಬಿಬ್ಬುಗೊಂಡಿದ್ದ. ಹೀಗಾಗಿ ಮರಳು ತುಂಬಿದ ವಾಹನವನ್ನು ಠಾಣೆಗೆ ಕೊಂಡೊಯ್ದಿದ್ದರು. ನಂತರದ
ಬೆಳವಣಿಗೆಯಲ್ಲಿ ಆನ್ಲೈನ್ ನಲ್ಲಿ ಲೈಸನ್ಸ್ ಪ್ರತಿ ತೋರಿದ್ದಾರೆಂದು ಹೇಳಲಾಗುತ್ತಿದ್ದು ವಾಹನವನ್ನು ಬಿಡುಗಡೆಗೊಳಿಸಿರುವುದಾಗಿ
ತಿಳಿದು ಬಂದಿದೆ.


ಮರಳು
ಸಾಗಾಟದ ವಾಹನ ಕೊಯಿಲ ಗ್ರಾಮದ ಏಣಿತ್ತಡ್ಕ ಪ್ರದೇಶದಿಂದ ರಾಜ್ಯ ಹೆದ್ದಾರಿ ಮೂಲಕ ಮರಳು ಸಾಗಾಟ ಮಾಡಲಾಗುತ್ತಿತ್ತು
ಎಂಬ ಮಾಹಿತಿ ಲಭಿಸಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿಲ್ಲ.

