35.1 C
Kadaba
Thursday, March 20, 2025

ಹೊಸ ಸುದ್ದಿಗಳು

ನೆಲ್ಯಾಡಿ ಬಳಿ ನಡೆದ ಅಪಘಾತದಲ್ಲಿ ಚಾಲಕ ಮೃತಪಟ್ಟ ಪ್ರಕರಣ:ಲಾರಿ ಚಾಲಕನಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಪುತ್ತೂರು ಕೋರ್ಟ್

Must read

kadabatimes.in
kadabatimes.in
kadabatimes.in

ನೆಲ್ಯಾಡಿ:ರಸ್ತೆ ಅಪಘಾತದಲ್ಲಿ ವಾಹನ ಚಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕನಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ ದಂಡ ವಿಧಿಸಿ ಪುತ್ತೂರು ಕೋರ್ಟ್ ಅ.25 ರಂದು ತೀರ್ಪು ಪ್ರಕಟಿಸಿದೆ.
 ಕಡಬ  ತಾಲೂಕು ನೆಲ್ಯಾಡಿ ಸಮೀಪದ  ಕೊಣಾಲು ಗ್ರಾಮದ ಕೋಲ್ಪೆ ಮಸೀದಿ ಬಳಿ ಫೆ.25.2021 ರಂದು ಲಾರಿ ಹಾಗೂ ದೋಸ್ತ್ ವಾಹನ ನಡುವೆ ಡಿಕ್ಕಿ ಸಂಭವಿಸಿ ದೋಸ್ತ್ ವಾಹನ ಚಾಲಕ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಹೆಚ್ಚುವರಿ ಸಿವಿಲ್ ನ್ಯಾಯಾಧಿಶರಾದ ಎಚ್ ಅರ್ ಶಿವಣ್ಣ ರವರು ಈ  ತೀರ್ಪು ಪ್ರಕಟಿಸಿದ್ದಾರೆ.
ಹಾಸನ ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಅಶೋಕ್ ಲೈಲ್ಯಾಂಡ್ ದೋಸ್ತ್ ಗಾಡಿ ನಡುವೆ ಈ ಡಿಕ್ಕಿ ಸಂಭವಿಸಿತ್ತು. ಪರಿಣಾಮ ದೋಸ್ತ್ ಗಾಡಿ ಚಾಲಕ ಚೇತನ್ ರವರಿಗೆ ಗಂಭೀರ ಗಾಯವಾಗಿ ಅವರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಆಸ್ಪತ್ರೆಗೆ ತರುವಾಗ ಆಸ್ಪತ್ರೆಯ ಬಳಿ ಮೃತ ಪಟ್ಟಿದ್ದರು.
ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧಿಶರು ಲಾರಿ ಚಾಲಕನಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಅಭಿಯೋಜಕರಾದ ಕವಿತಾ ವಾದ ಮಂಡಿಸಿದರು.