35.1 C
Kadaba
Thursday, March 20, 2025

ಹೊಸ ಸುದ್ದಿಗಳು

ಕಡಬ ಠಾಣಾ ವ್ಯಾಪ್ತಿ:ಅಕ್ರಮ ಮರಳುಗಾರಿಕೆ ಮಾಡುತ್ತಿದ್ದ ಅಡ್ಡೆಗೆ ಪೊಲೀಸ್ ದಾಳಿ, ಮರಳು ಸಹಿತ ವಾಹನ ವಶಕ್ಕೆ

Must read

kadabatimes.in

kadabatimes.in
kadabatimes.in

ಮುಖ್ಯಾಂಶಗಳು:


* ರಾಜಕೀಯ ಪ್ರಭಾವ ಬಳಸಿ ನಿರಂತರ ಅಕ್ರಮ ಮರಳು ದಂಧೆ
*ಮನೆ ಬಳಿ ದಾಸ್ತಾನು, ದುಬಾರಿ ಬೆಲೆಗೆ ಮಾರಾಟ
*ಅರಣ್ಯಾಧಿಕಾರಿಗಳೆ ಶಾಮೀಲಾಗಿರುವ ಶಂಕೆ
*ಕಡಬ ಪೊಲೀಸರ ದಿಢೀರ್ ದಾಳಿಗೆ ಮರಳು ಕಳ್ಳರು ತತ್ತರ

ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಮಾಯಿಪಾಜೆ ಎಂಬಲ್ಲಿನ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂದರ್ಭ  ಮರಳು ಸಹಿತ ವಾಹನ ವಶಕ್ಕೆ ಪಡೆಯಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಅ.26 ಶನಿವಾರ ಈ ದಾಳಿ ನಡೆಸಿದ್ದು ನದಿ ತಟದಿಂದ ವಶಕ್ಕೆ ಪಡೆದಿರುವ ಪಿಕಪ್  ವಾಹನ (KA12A2015) ನೆಕ್ಕಿಲಾಡಿ ಗ್ರಾಮದ ಮಾಯಿಪಾಜೆ ಅಜೆಯ ಎಂಬವರಿಗೆ ಸೇರಿದ್ದು ಎಂದು ಪೊಲೀಸರ ಪರಿಶೀಲನೆ ವೇಳೆ ತಿಳಿದು ಬಂದಿದೆ. ಅಲ್ಲದೆ ಈ ವ್ಯಕ್ತಿ ಮರ್ದಾಳ ಗ್ರಾ.ಪಂ ಸದಸ್ಯನಾಗಿದ್ದು  ಜನಪ್ರತಿನಿಧಿಯೇ ನೇರವಾಗಿ ಮರಳುದಂಧೆಯಲ್ಲಿ ತೊಡಗಿಕೊಂಡಿರುವುದು ಪೊಲೀಸರಿಗೆ ಅಚ್ಚರಿ ಮೂಡಿಸಿದೆ.ಈತ ಪ್ರತ್ಯಕ

 ಚಾಲಕ ಮತ್ತು ಕೆಲ ಸಹಚರರನ್ನು ಇಟ್ಟುಕೊಂಡು ರಾಜಾರೋಷವಾಗಿ ಮರಳು ದಂಧೆಯಲ್ಲಿ ತೊಡಗಿಕೊಂಡಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ಐದು ವರ್ಷಗಳಿಂದ ರಬ್ಬರ್ ನಿಗಮಕ್ಕೆ ಸೇರಿದ (  KFDC ) ಜಾಗದ ಮೂಲಕ ರಾಜಕೀಯ ಮತ್ತು ಕೆಲ ಅಧಿಕಾರಿಗಳ ಶ್ರೀ ರಕ್ಷೆಯಿಂದಲೇ ಅನಧಿಕೃತ ರಸ್ತೆ ನಿರ್ಮಿಸಿ  ಕುಮಾರಧಾರ ನದಿಯಿಂದ ಹಗಲು ರಾತ್ರಿ ಎನ್ನದೆ ನಿರಂತರ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ. ಇದೇ ವ್ಯಾಪ್ತಿಯ ಓಟೆಕಜೆ, ಕೊರಿಯರ್ ಪ್ರದೇಶದಲ್ಲೂ ತನ್ನ ಸಹಚರರ ಜೊತೆ ಸೇರಿಕೊಂಡು ಮರಳು ಕಳ್ಳತನ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
 ಕೆಲ ವರ್ಷಗಳ ಹಿಂದೆ ಅಕ್ರಮ ಮರಳು ಗಾರಿಕೆ ನಡೆಯುತ್ತಿರುವುದನ್ನು  ಪ್ರಶ್ನಿಸಿದ ಸ್ಥಳೀಯರೊಬ್ಬರನ್ನು ಅರಣ್ಯಾಧಿಕಾರಿಗಳ  ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸುವ ಮೂಲಕ ಜೈಲು ಸೇರುವಂತೆ ಮಾಡುವಲ್ಲಿ ಈತನ ಪಾತ್ರವೂ ಇತ್ತು ಎನ್ನಲಾಗಿದೆ.ಇನ್ನು ಕೊರಿಯರ್ ಬಳಿ ಮರಳು ಕಳ್ಳತನ ಮಾಡಿ ಸಿಕ್ಕಿಬಿದ್ದ ವೇಳೆ ಮಾದ್ಯಮದವರ ಮೇಲೆ ಮಹಿಳೆಯರ ಮೂಲಕ ಸುಳ್ಳು ಕೇಸು ನೀಡುವಲ್ಲಿ ಈತ ಮುಂಚೂಣಿಯಲ್ಲಿದ್ದ.
  ಈತನ ಈ ಮರಳು ದಂಧೆಗೆ ಸ್ಥಳೀಯ ಅರಣ್ಯಾಧಿಕಾರಿಗಳೇ ಸಾಥ್ ನೀಡಿರುವ ಆರೋಪಗಳು ಕೇಳಿ ಬಂದಿತ್ತು. ಅದಕ್ಕೆ ನಿಷ್ಠಾವಂತ ಕಡಬ ಪೊಲೀಸರ ದಾಳಿ ಮಾಡಿದ ವೇಳೆ ಸಿಕ್ಕಿರುವ ಪುರಾವೆಗಳೇ ಸಾಕ್ಷಿಯಂತಿದೆ.

kadabatimes.in
ಇನ್ನು ನದಿಯಿಂದ ಅಕ್ರಮವಾಗಿ ಮರಳು ತೆಗೆದು ತನ್ನ ಮನೆ ಸಮೀಪದ ಜಾಗದಲ್ಲಿ ಸಂಗ್ರಹಿಸಿ ದುಬಾರಿ ಬೆಲೆಗೆ ವಿವಿಧ ಕಡೆಗೆ ಸಾಗಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು ಇದಕ್ಕೆ ಪೂರಕ ಎಂಬಂತೆ ದಾಸ್ತಾನು ಇರಿಸಿದ ಮರಳು ಪತ್ತೆಯಾಗಿದೆ .
 ತನ್ನ ವಾಹನವನ್ನು ಯಾರೂ ಕೂಡ ಸುಲಭವಾಗಿ  ಪತ್ತೆ ಮಾಡಬಾರದೆನ್ನುವ ಸಲುವಾಗಿ ಪಿಕಪ್ ವಾಹನದ ಹಿಂಬದಿಗೆ ನಂಬರ್ ಪ್ಲೇಟ್ ಅಳವಡಿಸದೆ ಮರಳು ಸಾಗಾಟ ಮಾಡುತ್ತಿರುವ ವಿಚಾರವೂ ತಿಳಿದು  ಬಂದಿದೆ.
ಈ ಪ್ರಕರಣವನ್ನು ಕಡಬ ಪೊಲೀಸರು ಗಣಿ ಇಲಾಖೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.