35.1 C
Kadaba
Thursday, March 20, 2025

ಹೊಸ ಸುದ್ದಿಗಳು

ಏನೇಕಲ್ಲಿನಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದಿಂದ ಮನೆ ಭೇಟಿ ಅಭಿಯಾನ

Must read

 

kadabatimes.in
ಏನೆಕಲ್ಲಿನಲ್ಲಿ ಒಕ್ಕಲಿಕ  ಗೌಡ ಸಂಘದ ಸದಸ್ಯರು

kadabatimes.in

ಕಡಬ ಟೈಮ್,  ಕಡಬ
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿದೆ.



 ಮಹತ್ವಕಾಂಕ್ಷಿ
ಯೋಜನೆಯದ ಒಕ್ಕಲಿಗ ಗೌಡ ಸಮುದಾಯ ಭವನ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ತಾಲೂಕು ಆದ್ಯಂತ ಈಗಾಗಲೇ ಧನ ಸಂಗ್ರಹ ಹಾಗೂ
ಮಾಹಿತಿ ನೀಡುವಲ್ಲಿ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ.

kadabatimes.in


ರವಿವಾರದಂದು  ಸುಬ್ರಹ್ಮಣ್ಯ
ವಲಯಕೆ ಒಳಪಟ್ಟ ಏನೇಕಲ್ಲಿನಲ್ಲಿ ಸುಮಾರು 500ಕ್ಕಿಂತ ಮಿಕ್ಕಿ ಮನೆಗಳನ್ನು ಭೇಟಿ ಮಾಡಿ ಮಾಹಿತಿಗಳನ್ನು ನೀಡಿ ಸಮುದಾಯದ ನೂತನ ಸಭಾಂಗಣದ ಅಭಿವೃದ್ಧಿ ಕೆಲಸ ಕಾರ್ಯಗಳಿಗಾಗಿ ಧನ ಸಂಗ್ರಹವನ್ನು ಮಾಡಲಾಗಿದೆ.


ಸಂಘದ
ಸಂಘಟನಾ ಕಾರ್ಯದರ್ಶಿ ಶಿವರಾಮ ಏನಕಲ್ ಅವರ ಮನೆಯಿಂದ ಸುಮಾರು 150ಕ್ಕೂ ಮಿಕ್ಕಿ ಸಮಾಜ ಬಾಂಧವರು ಅಭಿಯಾನವನ್ನು ಆರಂಭಿಸಿದರು . ಸಂದರ್ಭದಲ್ಲಿ ಕಡಬ
ತಾಲೂಕು ಒಕ್ಕಲಿಗ ಗೌಡ  ಸೇವಾ
ಸಂಘದ ಅಧ್ಯಕ್ಷ ಸುರೇಶ ಬೈಲು, ಪದಾಧಿಕಾರಿಗಳು, ಸದಸ್ಯರುಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

kadabatimes.in