24.5 C
Kadaba
Thursday, March 20, 2025

ಹೊಸ ಸುದ್ದಿಗಳು

ಬೆಳ್ಳಾರೆ ಠಾಣಾ ವ್ಯಾಪ್ತಿ: ಮಲಗಿದ್ದ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ : ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಮೃತ್ಯು

Must read

 

kadabatimes.in
ಬೆಳ್ಳಾರೆ ಪೊಲೀಸ್ ಠಾಣೆ( KADABA TIMES)

kadabatimes.in

ಕಡಬ
ಟೈಮ್ , ಬೆಳ್ಳಾರೆ: 
ಕೊಡಿಯಾಲ
ಗ್ರಾಮದ ಕಲ್ಲರ್ಪೆ ಎಂಬಲ್ಲಿ ವೃದ್ಧನೋರ್ವ ತನ್ನ ತಮ್ಮನ ಪತ್ನಿ ಮಲಗಿದಲ್ಲಿಗೆ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಜಯಭಾರತಿ (56) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ನಡೆದಿದೆ.


.12ರಂದು ರಾತ್ರಿ ಮನೆಯ ಕೋಣೆಯಲ್ಲಿ ಮಲಗಿದ್ದ ಜಯಭಾರತಿ ಅವರ ಪತಿಯ ಅಣ್ಣ ಶಂಕರ ನಾಯಕ್ ಎಂಬಾತ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎನ್ನಲಾಗಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಶೇ. 80 ರಷ್ಟು ಗಾಯಗೊಂಡಿದ್ದ ಮಹಿಳೆಯನ್ನು ಸುಳ್ಯ ಆಸ್ಪತ್ರೆಗೆ ತಂದು ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

kadabatimes.in


ಜಯಭಾರತಿ
ಅವರ ಪತಿ ಜನಾರ್ದನ ನಾಯಕ್ ಎಂಬವರು ಒಂದೂವರೆ ವರ್ಷದ ಹಿಂದೆ ನಿಧನರಾಗಿದ್ದರು. ಜಯಭಾರತಿ ಮತ್ತು ಅವರ ಪುತ್ರ ಹಾಗೂ ಆರೋಪಿ ಶಂಕರ ನಾಯಕ್ ಮನೆಯಲ್ಲಿ ವಾಸ ಮಾಡುತ್ತಿದ್ದರು. ಜಯಭಾರತಿ ಅವರ ಪುತ್ರ ಇತ್ತೀಚೆಗಷ್ಟೇ ವಿದೇಶಕ್ಕೆ ಹೋದ ಕಾರಣ ಮನೆಯಲ್ಲಿ ಜಯಭಾರತಿ ಮತ್ತು ಶಂಕರ ನಾಯಕ್ ಮಾತ್ರ ಇದ್ದರು.


 ಪ್ಯಾರಲಿಸಿಸ್
ಅಟ್ಯಾಕ್ ಆಗಿ ಒಂದು ಕೈ ಮತ್ತು ಒಂದು
ಕಾಲಿನ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದ ಶಂಕರ ನಾಯಕ್ಗೆ ಊಟ, ಮದ್ದು
ಕೊಡುತ್ತಿದ್ದರೂ ಆರೋಪಿ ಶಂಕರ ನಾಯಕ್ ಜಯಭಾರತಿಯನ್ನು ಯಾವಾಗಲೂ ದ್ವೇಷಿಸುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿ ಶಂಕರ್ ನಾಯಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಗ್ಗೆ ಬೆಳ್ಳಾರೆ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadabatimes.in